ಕಾರು ಸಮೇತ ಚಿನ್ನದ ವ್ಯಾಪಾರಿ ಅಪಹರಣ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.12:- ಚಿನ್ನದ ವ್ಯಾಪಾರಿಯನ್ನು ಸಿನಿಮಿಯ ರೀತಿಯಲ್ಲಿ ಕಾರು ಸಮೇತ ಅಪಹರಿಸಿರುವ ಘಟನೆ ಇಂದು ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪ ನಡೆದಿದೆ.
ಶಿವು ಎಂಬುವರೇ ಅಪಹರಣಕ್ಕೊಳಗಾದವರು. ಮೈಸೂರು ಕಡೆಯಿಂದ ಕೇರಳಕ್ಕೆ ತೆರಳುವಾಗ ಎರಡು ಕಾರುಗಳಲ್ಲಿ ಬಂದ ದುಷ್ಕರ್ಮಿಗಳು ವ್ಯಾಪಾರಿಯ ಕಾರು ಅಡ್ಡಗಟ್ಟಿ ಚಾಲಕನನ್ನು ಹೊರಗೆಳೆದು ವ್ಯಾಪಾರಿಯನ್ನು ಅಪಹರಿಸಿದ್ದಾರೆ.
ದುಷ್ಕರ್ಮಿಗಳು ಹೆಲ್ಮೆಟ್ ಹಾಕಿಕೊಂಡಿದ್ದರು ಎಂದು ತಿಳಿದುಬಂದಿದೆ. ಪೆÇಲೀಸರ ದಿಕ್ಕು ತಪ್ಪಿಸಲು ಮೂರು ಕಾರುಗಳನ್ನು ಒಂದೊಂದು ದಿಕ್ಕಿಗೆ ಚಾಲನೆ ಮಾಡಿಕೊಂಡು ಹೋಗಿದ್ದು, ಒಂದು ಕಾರನ್ನು ಸೋಮಹಳ್ಳಿ ಬಳಿ ಜನರೇ ಹಿಡಿದು ಪೆÇಲೀಸರಿಗೆ ಒಪ್ಪಿಸಿದ್ದಾರೆ.
ಸದ್ಯ, ಕೇರಳ ಮೂಲದ ಪೆÇಲೀಸರು ಸೆರೆ ಹಿಡಿದು ಐವರನ್ನು ವಿಚಾರಣೆಗೆ ಒಳಪಡಿಸಿದ್ದು ವ್ಯಾಪಾರಿ ಹಾಗೂ ಉಳಿದ ಅಪಹರಣಕಾರರ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.