ಕಾರು ಮತ್ತು ದ್ವಿಚಕ್ರವಾಹನ ಡಿಕ್ಕಿ: ಓರ್ವನ ಸಾವು

ಕಲಬುರಗಿ.ಸೆ.20: ಕಾರು ಮತ್ತು ಟಿವಿಎಸ್ ಮಧ್ಯೆ ಡಿಕ್ಕಿಯಾಗಿ ಓರ್ವ ಅಸುನೀಗಿದ ಘಟನೆ ನಗರದ ಹೊರವಲಯದ ಜೈಲಿನ ಬಳಿ ಸೋಮವಾರ ಸಂಜೆ ವರದಿಯಾಗಿದೆ.
ಮೃತನಿಗೆ ಚಂದ್ರಕಾಂತ್ ಶರಣಪ್ಪ (೫೦) ಸಾ.ಇಟಗಾ(ಕೆ) ಎಂದು ಗುರುತಿಸಲಾಗಿದೆ. ಚಂದ್ರಕಾಂತ್ ಅವರು ಟಿವಿಎಸ್ ಮೇಲೆ ಕಲಬುರಗಿ ಕಡೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಈ ಕುರಿತು ಸಂಚಾರಿ ಪೋಲಿಸ್ ಠಾಣೆ ಒಂದರಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.