ಕಾರು ಬೈಕ್ ಡಿಕ್ಕಿ: ಬೈಕ್ ಸವಾರ ಸಾವು

ವಿಜಯಪುರ ಮೇ 13: ವಿಜಯಪುರ ಮುಖ್ಯ ರಸ್ತೆ ಮುದ್ದೇಬಿಹಾಳ- ಢವಳಗಿ ನಡುವೆ ಗುರುವಾರ ರಾತ್ರಿ ಸಂಭವಿಸಿದ ಕಾರು, ಬೈಕ್ ಅಪಘಾತದಲ್ಲಿ ಬೈಕ್ ಸವಾರ ಹಳ್ಳೂರು ಗ್ರಾಮದ ಮೋಹನ ಶಿವಪ್ಪ ಮಾದರ (32) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತದ ನಂತರ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದ ಕಾರು ತಗ್ಗಿನಲ್ಲಿ ಉರುಳಿ ಬಿದ್ದಿದೆ. ಕಾರಿನಲ್ಲಿರುವ ಚಾಲಕ ಸಮೇತ ಪ್ರಯಾಣಿಕರು ಯಾವುದೇ ಅಪಾಯ ಇಲ್ಲದೆ ಪಾರಾಗಿದ್ದಾರೆ.
ಮುದ್ದೇಬಿಹಾಳದಿಂದ ಬೈಕ್ ಸವಾರ ಸ್ವಗ್ರಾಮ ಹಳ್ಳೂರಕ್ಕೆ ತೆರಳುವಾಗ ಭಾರೀ ಗಾಳಿ, ಮಳೆಯಿಂದಾಗಿ ಎದುರಿನ ವಾಹನ ಕಾಣದೆ ಈ ದುರಂತ ಸಂಭವಿಸಿದೆ ಎಂದು ಪೆÇಲೀಸರು ಅಂದಾಜಿಸಿದ್ದಾರೆ.
ಘಟನೆ ಕುರಿತು ಮುದ್ದೇಬಿಹಾಳ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.