ಕಾರು-ಬೈಕ್ ಡಿಕ್ಕಿ: ಬಾಲಕ ಸಾವು, ಐವರಿಗೆ ಗಾಯ

ಕಲಬುರಗಿ,ಏ.24-ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ 6 ವರ್ಷದ ಬಾಲಕ ಮೃತಪಟ್ಟು, ಐವರು ಗಾಯಗೊಂಡ ಘಟನೆ ನಗರ ಹೊರವಲಯದ ಸೇಡಂ ರಸ್ತೆಯ ಗೀತಾ ನಗರ ಸಮೀಪ ನಿನ್ನೆ ಮಧ್ಯಾಹ್ನ ನಡೆದಿದೆ.
ಬಬಲಾದ ಐ.ಕೆ. ಗ್ರಾಮದ ಶ್ರೀಶೈಲ್ (6) ಮೃತಪಟ್ಟ ಬಾಲಕ. ಪಾರ್ವತಿ, ಸುನೀಲ, ಕುಶಾಲ, ಸಿದ್ರಾಮಪ್ಪ ಮತ್ತು ಜಗನ್ನಾಥ ಎಂಬುವವರು ಗಾಯಗೊಂಡಿದ್ದಾರೆ.
ಸುನೀಲ, ಪಾರ್ವತಿ ಮತ್ತು ಶ್ರೀಶೈಲ ಬೈಕ್ ಮೇಲೆ ವಚ್ಚಾ ಗ್ರಾಮಕ್ಕೆ ಹೊರಟಿದ್ದರು. ನ್ಯಾಯವಾದಿಗಳಾದ ಕುಶಾಲ, ಸಿದ್ರಾಮಪ್ಪ ಮತ್ತು ಉದ್ಯಮಿ ಜಗನ್ನಾಥ ಎಂಬುವವರು ಕಾರಿನಲ್ಲಿ ಕಲಬುರಗಿ ಕಡೆಗೆ ಆಗಮಿಸುತ್ತಿದ್ದರು. ಗೀತಾ ನಗರ ಸಮೀಪ ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ ಎಂದು ತಿಳಿದುಬಂದಿದೆ.
ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.