ಕಾರು-ಬೈಕ್ ಡಿಕ್ಕಿ: ಬಾಲಕ ಸಾವು

ಚಿಂಚೋಳಿ,ಜೂ.26-ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬಾಲಕನೊಬ್ಬ ಮೃತಪಟ್ಟು, ಇನ್ನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಚಿಂಚೋಳಿಯ ಸಕ್ಕರೆ ಕಾರ್ಖಾನೆ ಹತ್ತಿರ ನಡೆದಿದೆ.
ಚಿಮ್ಮಾ ಇದ್ಲಾಯಿ ಗ್ರಾಮದ ಚೀರು ತಂದೆ ರಮೇಶ (13) ಮೃತಪಟ್ಟ ಬಾಲಕ. ಉಮೇಶ ದೇವಿಂದ್ರಪ್ಪ ರಾಣಪುರ (28) ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.