ಕಾರು ಬಸ್ ಗೆ ಡಿಕ್ಕಿ ಇಬ್ಬರು
ಯುವಕರು ದಾರುಣ ಸಾವು

ಬೆಂಗಳೂರು, ಮಾ.14- ಅಜಾಗರೂಕ ಚಾಲನೆಯಿಂದ ಇಬ್ಬರು ಯುವಕರು ದಾರುಣವಾಗಿ ಬಲಿಯಾಗಿರುವ ದುರ್ಘಟನೆ ಮಡಿವಾಳದ ಸಿಲ್ಕ್ ಬೋರ್ಡ್​ ಬಳಿಯಲ್ಲಿ ನಡೆದಿದೆ.
ಆಂಧ್ರ ಪ್ರದೇಶದ ಅನಂತಪುರ ಮೂಲದ ಕಾರ್ತಿಕ್ (23), ಭಗೀರಥ ರೆಡ್ಡಿ (17) ಮೃತ ದುರ್ದೈವಿಗಳು ಎಂದು ಡಿಜಿಪಿ ಕಲಾಕೃಷ್ಣಸ್ವಾಮಿ‌ ಅವರು ತಿಳಿಸಿದ್ದಾರೆ.
ಇವರಿಬ್ಬರೂ ಕಾರಿನಲ್ಲಿ ಅತಿವೇಗವಾಗಿ ಹೋಗುತ್ತಾ ಹಿಂದಿನಿಂದ ತಮಿಳುನಾಡು ಸಾರಿಗೆ ಬಸ್​ಗೆ ಕಾರ್ತಿಕ್ ಡಿಕ್ಕಿ ಹೊಡೆದಿದ್ದಾರೆ.
ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಮಡಿವಾಳ ಸಂಚಾರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.