ಕಾರು ಪಲ್ಟಿ: ಹೆಡ್ ಕಾನ್ಸಟೇಬಲ್ ಸಾವು

ಕಲಬುರಗಿ,ಆ.7-ಕಾರಿನ ಟಾಯರ್ ಬ್ಲಾಸ್ಟ್ ಆಗಿ ಕಾರು ಪಲ್ಟಿಯಾಗಿ ಹೆಡ್‍ಕಾನ್ಸಟೇಬಲ್ ಒಬ್ಬರು ಸ್ಥಳದಲ್ಲಿಯೇ ಮೃತಪಟ್ಟು, ಇನ್ನಿಬ್ಬರು ಗಾಯಗೊಂಡಿರುವ ಘಟನೆ ಸೇಡಂ ತಾಲ್ಲೂಕಿನ ಮಳಖೇಡ ಪೆಟ್ರೋಲ್ ಬಂಕ್ ಹತ್ತಿರ ಇಂದು ನಡೆದಿದೆ.
ಮೃತರನ್ನು ನಗರದ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಹೆಡ್‍ಕಾನ್ಸಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಮೋಮಿನಪುರದ ಮೋಯಿಜುದ್ದೀನ್ (52) ಎಂದು ಗುರುತಿಸಲಾಗಿದ್ದು, ಅವರ ಸಹೋದರ ನಜುಮೋದ್ದಿನ್ ಮತ್ತು ಇನ್ನೊಬ್ಬರು ಗಾಯಗೊಂಡಿದ್ದಾರೆ. ಅವರನ್ನು ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇವರು ಕಲಬುರಗಿಯಿಂದ ಕಾರಿನಲ್ಲಿ ಸೇಡಂಗೆ ಹೋಗುತ್ತಿದ್ದಾಗ ಮಳಖೇಡ ಹತ್ತಿರ ಕಾರಿನ ಟಾಯರ್ ಬ್ಲಾಸ್ಟ್ ಆಗಿ ಕಾರು ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ. ಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.