ಕಾರು ಪಲ್ಟಿ: ಸ್ಥಳದಲ್ಲೇ ವ್ಯಕ್ತಿ ಸಾವು

ಸಿರವಾರ ಆ೦೫: ಪಟ್ಟಣದ ಹೊರವಲಯದ ದೇವದುರ್ಗ ರಸ್ತೆಯ ವೇ ಬ್ರಿಜ್ ಹತ್ತಿರದ ತಿರುವಿನಲ್ಲಿ ಅತೀ ವೇಗವಾಗಿ ಕಾರನ್ನು ಚಲಾಯಿಸಿದ ಪರಿಣಾಮವಾಗಿ ಪಕ್ಕದ ಜಮೀನಿನಲ್ಲಿ ಕಾರ್ ಪಲ್ಟಿಯಾಗಿ ಒಬ್ಬ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.
ಕಾರಿನಲ್ಲಿದ್ದ ಶಿವಲಿಂಗಪ್ಪ ಎಂಬ ವ್ಯಕ್ತಿಯ ತಲೆಗೆ ಮತ್ತು ಎದೆಗೆ ತೀವ್ರವಾದ ಪೆಟ್ಟಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ನಿರ್ಲಕ್ಷ್ಯ ತನದ ಚಾಲನೆ ಮಾಡಿದ ನಾಗರಾಜ ಮತ್ತು ಸಹ ಪ್ರಯಾಣಿಕ ಸೈಬಣ್ಣ ಗಾಯಗೊಂಡಿದ್ದಾರೆ.
ಘಟನೆ ಗೆ ಸಂಬಂಧಿಸಿದಂತೆ ಪಿಎಸ್‌ಐ ಗುರುಚಂದ್ರ ಯಾದವ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.