ಕಾರು ಪಲ್ಟಿ: ಬಾಲಕ ಸೇರಿ ಇಬ್ಬರ ಸಾವು

ಕಲಬುರಗಿ,ಅ 25: ಕಾರು ಪಲ್ಟಿಯಾಗಿ ಒಬ್ಬ ಬಾಲಕ ಸೇರಿದಂತೆ ಇಬ್ಬರು ಸಾವನ್ನಪ್ಪಿದ ಘಟನೆ ವಾಡಿ ಬಳಿ ಹಲಕರ್ಟಿ- ಲಾಡ್ಲಾಪುರ ರಸ್ತೆಯಲ್ಲಿ ಸಂಭವಿಸಿದೆ.
ಶಹಬಾದ್ ನಿಜಾಂಬಜಾರ್ ನಿವಾಸಿಗಳಾದ ದಯಾನಂದ ದೇವಸಿಂಗ್ ( 8 ) ಮತ್ತು ರಮೇಶ ಜೀವಲಾ ಪವಾರ ( 45) ಮೃತರು.
ದುರ್ಘಟನೆಯಲ್ಲಿ ಏಳು ಜನ ಗಾಯಗೊಂಡಿದ್ದು,ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ದೇವರ ಕಾರ್ಯ ಮುಗಿಸಿಕೊಂಡು ಶಹಬಾದ್ ಕಡೆಗೆ ಹೊರಟಾಗ ದುರ್ಘಟನೆ ಸಂಭವಿಸಿದೆ.ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.