ಕಾರು ಪಲ್ಟಿ: ಇಬ್ಬರು ವಿದ್ಯಾರ್ಥಿಗಳ ಸಾವು

ಧಾರವಾಡ, ಏ 18: ಕಾರು ಪಲ್ಟಿಯಾದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇನ್ನಿಬ್ಬರು ಗಾಯಗೊಂಡ ಘಟನೆ ತೇಗೂರ ಗ್ರಾಮದ ಬಳಿ ಇಂದು ಬೆಳಿಗ್ಗೆ ಸಂಭವಿಸಿದೆ.
ಮಾಜಖಾನ್ ಪಠಾಣ ಹಾಗೂ ಮುಜಬೀಲ್ ಅಧೋನಿ ಅಪಘಾತದಲ್ಲಿ ಸಾವನ್ನಪ್ಪಿದವರು. ತನ್ವೀರ್ ರಿಯಾಜ್ ಸೌದಾಗರ ಹಾಗೂ ಸೂಫಿಯಾನ್ ಮುನ್ನಾ ಅಪಘಾತದಲ್ಲಿ ಗಾಯಗೊಂಡಿದ್ದು, ಇವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇವರೆಲ್ಲರೂ ಹಿರೇಬಾಗೇವಾಡಿ ಹತ್ತಿರ ರೋಜಾ ಶಹರಿಗಾಗಿ ಹೋಗಿ ಗೆಳೆಯರೊಂದಿಗೆ ರಾತ್ರಿ ಕಳೆದಿದ್ದು, ಬೆಳಗಿನ ಜಾವ ಮರಳಿ ಬರುತ್ತಿರುವಾಗ ತೇಗೂರ ಗ್ರಾಮದ ಬಳಿ ಕಾರು ಪಲ್ಟಿಯಾಗಿ ಈ ದುರ್ಘಟನೆ ಸಂಭವಿಸಿದೆ.
ಸ್ಥಳಕ್ಕೆ ಗರಗ ಪೆÇಲೀಸ್ ಠಾಣೆ ಪೆÇಲೀಸರು ಧಾವಿಸಿ ಪರಿಶೀಲಿಸಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.