
ಕಲಬುರಗಿ,ಆ.30-ಕಾರು ಡಿಕ್ಕಿ ಹೊಡೆದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಗರದ ಜೇವರ್ಗಿ ರಸ್ತೆಯ ರಾಮ ಮಂದಿರ ಬಳಿ ನಿನ್ನೆ ನಡೆದಿದೆ.
ಮೃತಳನ್ನು ಚಿತ್ತಾಪುರ ತಾಲ್ಲೂಕಿನ ಕಡಬೂರ ಗ್ರಾಮದ ಸಾಹೇಬಬೀ ಗಂಡ ಖಾಜಾ ಹುಸೇನ್ ನಿಡಗುಂದಾವಾಲೆ (48) ಎಂದು ಗುರುತಿಸಲಾಗಿದೆ.
ಇವರು ಕಲಬುರಗಿಯಲ್ಲಿರುವ ಮಗಳ ಮನೆಗೆ ಬಂದು ಮರಳಿ ಕಡಬೂರ ಗ್ರಾಮಕ್ಕೆ ತೆರಳಲು ರಾಮ ಮಂದಿರ ಬಳಿ ¨ಸ್ಸಿಗಾಗಿ ಕಾಯುತ್ತ ಕುಳಿತಿದ್ದರು. ಈ ವೇಳೆ ಕಾರು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಸಂಚಾರಿ ಪೊಲೀಸ್ ಠಾಣೆ-1ರಲ್ಲಿ ಪ್ರಕರಣ ದಾಖಲಾಗಿದ್ದು, ಪಿಐ ಶಾಂತಿನಾಥ ಅವರು ತನಿಖೆ ಕೈಗೊಂಡಿದ್ದಾರೆ.