
ವಿಜಯಪುರ,ಮೇ.14-ಬೈಕ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾದ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಧೂಳಖೇಡ ಬಳಿ ನಡೆದಿದೆ.
ಮೃತನನ್ನು ಬರಗುಡಿಯ ಶಿವಾನಂದ ಪರಸಪ್ಪ ಹರಳಯ್ಯ (33) ಎಂದು ಗುರುತಿಸಲಾಗಿದೆ.
ಶಿವಾನಂದ ಹರಳಯ್ಯ ಬೈಕ್ನಲ್ಲಿ ರೇವತಗಾಂವ ಕಡೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಈ ಘಟನೆಯಲ್ಲಿ ಕಾರು ಚಾಲಕನಿಗೂ ಗಾಯವಾಗಿದೆ. ಝಳಕಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.