ಕಾರು ಡಿಕ್ಕಿ : ಬೈಕ್ ನಲ್ಲಿದ್ದ ಇಬ್ಬರು ಸಾವು!

ಶಿವಮೊಗ್ಗ, ಮೇ 4: ವೇಗವಾಗಿ ಆಗಮಿಸಿದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರಹಾಗೂ ಹಿಂಬದಿ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ
ಉಳವಿ ಸಮೀಪ ಬುಧವಾರ ನಡೆದಿದೆ.ಸಾಗರದ ರಾಮನಗರದ ನಿವಾಸಿಗಳಾದ ವೆಲ್ಡಿಂಗ್ ಕೆಲಸ ಮಾಡುವ ಸುಹೇಲ್ (27) ಹಾಗೂ ಅಫ್ರೀದ್(21) ಮೃತಪಟ್ಟವರೆಂದು ಗುರುತಿಸಲಾಗಿದೆ. ಇವರಿಬ್ಬರು ಸಹೋದರರಾಗಿದ್ದಾರೆ.ಉಳವಿಯಲ್ಲಿ ಆಯೋಜಿತವಾಗಿದ್ದ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೈಕ್ ನಲ್ಲಿತೆರಳುತ್ತಿದ್ದಾಗ ವ್ಯಾಗನರ್ ಕಾರು ಡಿಕ್ಕಿಯಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು
ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.