ಕಾರು ಡಿಕ್ಕಿ – ಅಪಾಯದಿಂದ ಪಾರು

ಸುಳ್ಯ, ಜ.೧೦- ಸುಳ್ಯದ ಸೋಣಂಗೇರಿಯಲ್ಲಿ ಕಾರೊಂದು ರಸ್ತೆ ಬದಿ ಇರುವ ನಾಮಫಲಕಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಸುಬ್ರಹ್ಮಣ್ಯ ಕಡೆಯಿಂದ ಸೋಣಂಗೇರಿ ಮಾರ್ಗವಾಗಿ ಕೇರಳಕ್ಕೆ ಹೋಗುತ್ತಿರುವ ಇರ್ಟಿಗಾ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಹಾಕಿರುವ ನಾಮಫಲಕಕ್ಕೆ ಡಿಕ್ಕಿ ಹೊಡೆದಿದೆ. ಕಾರಲ್ಲಿರುವ ಚಾಲಕ ಹಾಗೂ ಮತ್ತೋರ್ವರು ವಿಪರೀತ ಮದ್ಯ ಸೇವಿಸಿರುವುದರಿಂದ ಈ ಘಟನೆ ಸಂಭವಿಸಿರುವುದಾಗಿ ತಿಳಿದು ಬಂದಿದೆ.