
(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ, ಆ23: ಪಟ್ಟಣದ ಪೊಲೀಸರು ಅಂತರ್‍ರಾಜ್ಯ ಕಾರು ಕಳ್ಳನನ್ನು ಬಂಧಿಸಿ ಆತನಿಂದ ಕದ್ದ ಒಟ್ಟು 15 ಲಕ್ಷ ರೂಪಾಯಿ ಕಿಮ್ಮತ್ತಿನ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಉಂಬಳಬೈಲಿನ ಸೈಯದ್ ಇರ್ಫಾನ್ ಉರ್ಫ ನಿಹಾಲ್ ತಂದೆ ಬಶೀರ್‍ನೇ ಕಾರು ಕಳ್ಳನಾಗಿದ್ದಾನೆ.
ಈತ ದೆಹಲಿಯಲ್ಲಿ ಒಂದು ಕಾರು ಹಾಗೂ ಕರ್ನಾಟಕ ಬೇರೆ ಬೇರೆ ರಾಜ್ಯಗಳಿಂದ ಎರಡು ಕಾರುಗಳನ್ನು ಕದ್ದಿದ್ದಾನೆ. ಕಳ್ಳ ತಾನು ಕಾರಿನೊಂದಿಗೆ ಮಂಗಳವಾರ ಲಕ್ಷ್ಮೇಶ್ವರದ ರಂಭಾಪುರಿ ನಗರದಲ್ಲಿ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾನೆ. ಕಳ್ಳನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಸಿಪಿಐ ಎಸ್.ಎಂ. ಯರಗುಪ್ಪಿ, ಪಿಎಸ್‍ಐ ಯುಸೂಫ್ ಜಮೂಲಾ, ಕ್ರೈಮ್ ಪಿಎಸ್‍ಐ ವಿ.ಜಿ. ಪವಾರ, ಎಎಸ್‍ಐಗಳಾದ ಎಂ.ಎ. ಮೌಲ್ವಿ, ಟ.ಕೆ. ರಾಠೋಡ, ವೈ.ಎಸ್. ಕೂಬಿಹಾಳ, ಎಸ್.ಎಸ್. ಮಕಾನದಾರ, ಜಿ.ಎಂ. ಬೂದಿಹಾಳ, ಹಾಗೂ ಸಿಬ್ಬಂದಿಗಳಾದ ಎಂ.ಎ. ಶೇಕ್, ಎಂ.ಡಿ. ಲಮಾಣಿ, ಆರ್.ಎಸ್. ಯರಗಟ್ಟಿ, ಎಂ.ಎಸ್. ಬಳ್ಳಾರಿ, ಪ್ರಕಾಶ ಮ್ಯಾಗೇರಿ, ಆನಂದಸಿಂಗ್ ದೊಡ್ಡಮನಿ, ಸಿ.ಎಸ್. ಮಠಪತಿ, ಡಿ
.ಎಸ್. ನದಾಫ್, ಜಿ.ಆರ್. ಗ್ರಾಮಪುರೋಹಿತ, ಆನಂದ ಕಮ್ಮಾರ, ಎಚ್.ಐ. ಕಲ್ಲಣ್ಣವರ, ಎನ್.ಎಚ್. ಮಠಪತಿ, ಸೋಮು ವಾಲ್ಮೀಕಿ, ಸಂಜು ಕೊರಡೂರ, ಮಧು ಧಾರವಾಡ, ಮಹಾಂತೇಶ ಐಗಾರ, ಮಲ್ಲಿಕಾರ್ಜುನ ಅಂಗಡಿ, ಕೆ.ಮುಕಾಶಿ, ಅಪ್ಪಣ್ಣ ರಾಠೋಡ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಭಿನಂದಿಸಿದ್ದಾರೆ.