ಕಾರು ಕದ್ದು ಪರಾರಿಯಾಗಲು ಯತ್ನಿಸಿದ ಕಳ್ಳ

ವಿಜಯಪುರ,ಜ.16-ಕಾರು ಕದ್ದ ಕಳ್ಳನೋರ್ವ ಟೋಲ್‍ಗೇಟ್ ಮೂಲಕ ಪರಾರಿಯಾಗಲು ಯತ್ನಿಸಿರುವ ಘಟನೆ ವಿಜಯಪುರ ನಗರದ ಟೋಲ್‍ಗೇಟ್ ಬಳಿ ರವಿವಾರ ನಡೆದಿದೆ.
ಇಳಕಲ್‍ನಲ್ಲಿ ಅನ್ಸಾರಿ ಎಂಬುವರ ಕೆ.ಎ.01ಎಂಸಿ0973 ನಂಬರಿನ ಕಾರು ಕಳ್ಳತನ ಮಾಡಿ ಇಳಕಲ್‍ನಿಂದ ವಿಜಯಪುರಕ್ಕೆ ಆಗಮಿಸಿದ್ದಾನೆ. ಈ ವೇಳೆ ನಗರದ ಟೋಲ್‍ಗೇಟ್‍ನಲ್ಲಿ ಸಿಬ್ಬಂದಿಗಳು ತಪಾಸಣೆ ಮಾಡಿದ್ದಾರೆ. ಈ ವೇಳೆ ಕಳ್ಳನ ಮೇಲೆ ಅನುಮಾನಗೊಂಡ ಸಿಬ್ಬಂದಿಗಳು ತಪಾಸಣೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಕಳ್ಳ ಚಾಕು ತೋರಿಸಿ ಹಲ್ಲೆ ಮಾಡಲು ಮುಂದಾಗಿದ್ದಾನೆ. ತಕ್ಷಣವೇ ಇತರೆ ಸಿಬ್ಬಂದಿಗಳು ಸಹಾಯಕ್ಕೆ ಓಡಿ ಬಂದಿದ್ದು ಕಂಡು ಕಳ್ಳ ಕಾರು ಅಲ್ಲಿಯೇ ಬಿಟ್ಟು ಜಮೀನಿನಲ್ಲಿ ಪರಾರಿಯಾಗಿದ್ದಾನೆ. ಈ ಸಂಬಂಧ ವಿಜಯಪುರ ಗ್ರಾಮೀಣ ಪೆÇಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.