ಕಾರು ಅಪಘಾತ ನಾಲ್ವರು ದಾರುಣ ಸಾವು

ಬಾಗಲಕೋಟೆ,ಮಾ.೨೯- ಅಪರಿಚತ ವಾಹನಕ್ಕೆ ಕಾರು ಡಿಕ್ಕಿ ಹೊಡೆದು ನಾಲ್ವರು ಸ್ಥಳದಲ್ಲಿಯೇ ಮೃತ ಪಟ್ಟಿರುವ ದಾರುಣ ಘಟನೆ ಹುನಗುಂದ ತಾಲೂಕಿನ ಬೇವಿನಮಟ್ಟಿ ಬಳಿಯಲ್ಲಿ ನಡೆದಿದೆ.
ಇಳಕಲ್ ನ ಚಂದ್ರು ಬುಟ್ಟಾ, ನವೀನ ಸಾಕಾ, ಕರಿಬಸಯ್ಯ ಎಂದು ಮೃತರನ್ನು ಗುರುತಿಸಲಾಗಿದ್ದು ಇನ್ನೊಬ್ಬನ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಮೃತರೆಲ್ಲರೂ ಸುಮಾರು ೩೦ ರಿಂದ ೪೦ ವಯಸ್ಸಿನೊಳಗಿನವರು ಎಂದು ತಿಳಿದು ಬಂದಿದೆ.
ಚಾಲಕ ವಿಜಯ ಬಂಡಿ ಗಂಭೀರ ಗಾಯಗೊಂಡಿದ್ದು, ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುನಗುಂದ-ಅಮೀನಗಡ ಮಧ್ಯದ ಬೇವಿನಮಟ್ಟಿ ಬಳಿ ಕಾರಿಗೆ ಡಿಕ್ಕಿ ಹೊಡೆದ ಅಪರಿಚಿತ ವಾಹನದ ಚಾಲಕ ವಾಹನ ನಿಲ್ಲಿಸದೇ ಪರಾರಿಯಾಗಿದ್ದಾನೆ.
ಅಪಘಾತ ಸುದ್ದಿ ತಿಳಿದು ಹುನಗುಂದ ಪಿಎಸ್ ಐ, ಸಿಪಿಐ ಸೇರಿ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಕುರಿತು ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ