ಕಾರು ಅಪಘಾತ ನಟಿ ರಿಷಿಕಾಗೆ ಗಾಯ

ಬೆಂಗಳೂರು, ಜು. ೩೦- ನಟಿ ರಿಷಿಕಾ ಸಿಂಗ್ ಚಲಾಯಿಸುತ್ತಿದ್ದ ಕಾರು ಯಲಹಂಕ ಬಳಿ ಅಪಘಾತವಾದ ಹಿನ್ನೆಲೆಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಇಂದು ನಡೆದಿದೆ.
ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಪುತ್ರಿಯಾಗಿರುವ ರಿಷಿಕಾ ಸಿಂಗ್ ಅವರು ಚಲಾಯಿಸುತ್ತಿದ್ದ ಕಾರಿನಲ್ಲಿ ಹಿರಿಯ ನಟ ಜೈಜಗದೀಶ್ ಅವರ ಮೊದಲ ಪತ್ನಿಯ ಮಗಳು ಅರ್ಪಿತಾ ಕೂಡ ಇದ್ದರು ಎನ್ನಲಾಗಿದ್ದು, ಇಬ್ಬರಿಗೂ ಗಾಯಗಳಾಗಿದ್ದು, ಶೇಷಾದ್ರಿಪುರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸದ್ಯಕ್ಕೆ ಅಪಘಾತಕ್ಕೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಇನ್ನಷ್ಟೇ ವಿಷಯ ತಿಳಿಯಬೇಕಾಗಿದೆ,.
ಗಾಯಗೊಂಡ ರಿಷಿಕಾ ಸಿಂಗ್ ಮತ್ತು ಅರ್ಪಿತಾ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ರಿಷಿಕಾ ಸಿಂಗ್ ಕಳ್ಳ ಮಳ್ಳ ಸುಳ್ಳ, ಕಂಠೀರವ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು.

Photo :
Rishikasing
Rishikasing1