
ಸಂಜೆವಾಣಿ ನ್ಯೂಸ್
ಮೈಸೂರು.ಸೆ.03:- ತಿರುಪತಿ ತಿಮ್ಮಪ್ಪನ ದರ್ಶನ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಆಂಧ್ರದ ಚಿತ್ತೂರು ಜಿಲ್ಲೆಯ ಪಲಮನೇರು ಬಳಿ ಹುಣಸೂರು ಉಪ ವಿಭಾಗದ ಅಬಕಾರಿ ಡಿವೈಎಸ್ಪಿ ಕೆ.ಟಿ.ವಿಜಯಕುಮಾರ್ ಅವರ ಕಾರು ಅಪಘಾತವಾಗಿದ್ದು ಅವರ ತಂದೆ ಗಿರಿಗೌಡ (80) ಸ್ಥಳದಲ್ಲೇ ಸಾವಿಗೀಡಾದರು.
ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ವಿಜಯಕುಮಾರ್ ತೀವ್ರವಾಗಿ ಗಾಯಗೊಂಡಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೆÇಲೀಸರು ತಿಳಿಸಿದರು.
ಬೆಂಗಳೂರಿನ ಗೋಕುಲ ವಲಯದ ಅಬಕಾರಿ ಸರ್ಕಲ್ ಇನ್‍ಸ್ಪೆಕ್ಟರ್ ಲೋಕೇಶ್ ವಾಹನ ಚಲಾಯಿಸುತ್ತಿದ್ದರು ಎಂದು ಗೊತ್ತಾಗಿದ್ದು, ಚಾಲಕ, ವಿಜಯಕುಮಾರ್ ತಾಯಿ ಮತ್ತು ಅಕ್ಕ ಅಪಾಯದಿಂದ ಪಾರಾಗಿದ್ದಾರೆ.
ಗಿರಿಗೌಡ ಅವರ ಅಂತ್ಯಸಂಸ್ಕಾರವು ಮದ್ದೂರು ತಾಲ್ಲೂಕಿನ ಕೆಸ್ತೂರಿನ ಸ್ವಗ್ರಾಮದಲ್ಲಿ ಭಾನುವಾರ ನಡೆಯಲಿದೆ’ ಎಂದು ಡಿವೈಎಸ್ಪಿ ಪತ್ನಿ ವಿದ್ಯಾ ತಿಳಿಸಿದ್ದಾರೆ ಎಂದು ಹುಣಸೂರು ಅಬಕಾರಿ ಸರ್ಕಲ್ ಇನ್‍ಸ್ಪೆಕ್ಟರ್ ನಾಗಲಿಂಗಯ್ಯ ಸ್ವಾಮಿ ತಿಳಿಸಿದರು.