ಕಾರು ಅಪಘಾತ: ಕೇಂದ್ರ ಸಚಿವ ಶ್ರೀಪಾದ ನಾಯ್ಕ ಪತ್ನಿ, ಆಪ್ತ ಸಹಾಯಕ ಸಾವು

ಕಾರವಾರ, ಜ12- ಕೇಂದ್ರದ ಆಯುಷ್ ಹಾಗೂ ರಕ್ಷಣಾ ಇಲಾಖೆ ರಾಜ್ಯ ಸಚಿವ ಶ್ರೀಪಾದ ನಾಯ್ಕ ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಹೊಸಕಂಬಿಯ ಬಳಿ ಜರುಗಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದು, ಅವರ ಪತ್ನಿ ವಿಜಯಾ ನಾಯ್ಕ ಹಾಗೂ ಆಪ್ತ ಸಹಾಯಕ ದೀಪಕ ದುಬೆ ಸಾವನ್ನಪ್ಪಿದ್ದಾರೆ.
ಮುಂಜಾನೆ ಶ್ರೀಪಾದ ನಾಯ್ಕ ಇತರ ನಾಲ್ವರು ಧರ್ಮಸ್ಥಳ ಮತ್ತು ಸುಬ್ರಮಣ್ಯ ಧಾರ್ಮಿಕ ಪ್ರವಾಸ ಮುಗಿಸಿ ಇನ್ನೊವಾ ಕಾರ್‍ನಲ್ಲಿ ಯಲ್ಲಾಪುರದ ಪ್ರಸಿದ್ಧ ಗಂಟೆ ಗಣಪತಿ ದೇವಾಲಯಕ್ಕೆ ಪೂಜೆಗಾಗಿ ಆಗಮಿಸಿದ್ದರು. ಸಂಜೆ ಪೂಜೆ ಮುಗಿಸಿ ಗೋಕರ್ಣದತ್ತ ಹಿಲ್ಲೂರ ಮಾರ್ಗವಾಗಿ ತೆರಳುತ್ತಿರುವಾಗ ಹೊಸಕಂಬಿ ಬಳಿ ಕಾರು ನಿಯಂತ್ರಣ ತಪ್ಪಿ ಕಂದಕದಲ್ಲಿ ಉರುಳಿದೆ. ಘಟನೆಯಲ್ಲಿ ಶ್ರೀಪಾದ ನಾಯ್ಕ ಅವರ ಪತ್ನಿ ವಿಜಯಾ ನಾಯ್ಕ ಅವರ ತಲೆಗೆ ಬಲವಾದ ಏಟು ಬಿದ್ದಿದೆ. ಅಲ್ಲದೇ ಶ್ರೀಪಾದ ನಾಯ್ಕ ಸೇರಿದಂತೆ ಕಾರಿನಲ್ಲಿದ್ದ ಇತರರು ತೀವ್ರವಾಗಿ ಗಾಯಗೊಂಡಿದ್ದಾರೆ. ಸುದ್ದಿ ತಿಳಿದ ತಕ್ಷಣ ಅಂಕೋಲಾ ಪೆÇೀಲಿಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ತಮ್ಮ ಜೀಪ್‍ನಲ್ಲಿ ಅಂಕೋಲಾದ ಆಸ್ಪತ್ರೆಗೆ ತಂದು ದಾಖಲಿಸಿದ್ದಾರೆ.
ಅಂಕೋಲಾದ ಖಾಸಗಿ ಆಸ್ಪತ್ರೆಯಲ್ಲಿ ಸಚಿವರ ಪತ್ನಿ ವಿಜಯಾ ಕೊನೆಯುಸಿರೆಳೆದರೆ, ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಚಿವರ ಆಪ್ತ ಸಹಾಯಕ ದೀಪಕ್ ದುಬೆ
ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಸಚಿವ ಶ್ರೀಪಾದ ನಾಯ್ಕ ಹಾಗೂ ಇತರರನ್ನು ಗೋವಾ ಮೆಡಿಕಲ್ ಕಾಲೇಜಿಗೆ ಸ್ಥಳಾಂತರಿಸಲಾಗಿದೆ.
ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.