ಕಾರುಣ್ಯ ಆಶ್ರಮದ ಸೇವೆ ಶ್ಲಾಘನೀಯ- ಶಿವಾನಂದ ತಗಡೂರು

ಸಿಂಧನೂರು.ಜು.೨೯- ಅನಾಥ ಮತ್ತು ಬುದ್ದಿ ಮಾಂದ್ಯರಿಗೆ ಅನ್ನ ಆಶ್ರಯ ನೀಡಿ ರಕ್ಷಣೆ ಮಾಡುವ ಕಾರಣ್ಯ ಆಶ್ರಮದ ಸೇವೆ ಶ್ಲಾಘನೀಯ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷರಾದ ಶಿವಾನಂದ ತಗಡೂರ ಹೇಳಿದರು.
ನಗರದ ಕುಷ್ಟಗಿ ರಸ್ತೆಯಲ್ಲಿರುವ ಶ್ರೀ ಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರುಣ್ಯ ನೆಲೆ ವೃದ್ದಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂಧ್ಯ ಆಶ್ರಮಕ್ಕೆ ಭೇಟಿ ನೀಡಿ ಎಲ್ಲಾ ವೃದ್ಧರ ಹಾಗೂ ಬುದ್ಧಿಮಾಂದ್ಯರ ಯೋಗ ಕ್ಷೇಮವನ್ನು ವಿಚಾರಿಸಿ ಆಶ್ರಮದ ಸೇವೆಯ ಬಗ್ಗೆ ಮಾಹಿತಿ ಪಡೆದುಕೊಂಡರು.
ನನಗೆ ಕಾರುಣ್ಯ ಆಶ್ರಮದ ಬಗ್ಗೆ ಮಾಹಿತಿ ಪಡೆದುಕೊಂಡು ಅನಾಥರ ಸೇವೆ ಮಾಡುತ್ತಿರುವದು ಕಾರುಣ್ಯ ಆಶ್ರಮದ ಸೇವೆ ಮುಖಂಡರಾದ ಚನ್ನಬಸವ ಇಲ್ಲಿ ಸ್ವಾಮಿ ಸಮಾಜ ಮುಖಿ ಕೆಲಸ ಮಾಡುತ್ತಿದ್ದಾರೆ ಎಂದರು. ಅನಾಥ ವಯಸ್ಕರ ಬುದ್ದಿಮಾಂದ್ಯ ಜೀವಿಗಳು ಯಾರು ಹಸಿವಿನಿಂದ ಇರಬಾರದು ಎನ್ನುವ ಉದ್ದೇಶವನ್ನಿಟ್ಟುಕೊಂಡು ನಾಡಿನಲ್ಲಿ ಜೋಳಿಗೆ ಹಾಕುವುದರ ಮೂಲಕ ಅಂಧ ಅನಾಥರ ಬಾಳಿಗೆ ಬೆಳಕಾಗಿರುವ ಚನ್ನಬಸಯ್ಯಸ್ವಾಮಿ ಹಿರೇಮಠ ಸಮಾಜದ ದೊಡ್ಡ ಆಸ್ತಿಯಾಗಿದ್ದಾರೆ.
ಇವರ ವಿಶೇಷ ಸೇವೆ ಆತ್ಮಹತ್ಯೆಯ ನಿರ್ಧಾರವನ್ನು ತೆಗೆದುಕೊಂಡು ಇವರನ್ನು ಸಂಪರ್ಕ ಮಾಡಿದ ಎಷ್ಟೋ ಜೀವಿಗಳನ್ನು ರಕ್ಷಿಸಿ ಏನೇ ಕಷ್ಟ ಬಂದರೂ ಸಹಿತ ಆತ್ಮಹತ್ಯೆಯನ್ನು ತಿರಸ್ಕರಿಸಬೇಕು ಎನ್ನುವ ಮಾತುಗಳ ಮೂಲಕ ಅವರಿಗೆ ಈ ಆಶ್ರಮದಲ್ಲಿ ಸೇವೆಯ ಅವಕಾಶವನ್ನು ನೀಡಿ ಅವರ ಜೀವನವನ್ನು ಕಟ್ಟಿಕೊಟ್ಟಿರುವ ಈ ಕಾರುಣ್ಯ ಆಶ್ರಮಕ್ಕೆ ಸರ್ಕಾರದ ಅನುದಾನ ಹಾಗೂ ಸ್ಥಳ ಕಟ್ಟಡದ ಅವಶ್ಯಕತೆಯ ಮಾಹಿತಿಯನ್ನು ನಮ್ಮ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಎಲ್ಲಾ ಪದಾಧಿಕಾರಿಗಳು ಮಾಡುತ್ತೇವೆಂದರು.
ಆಶ್ರಮಕ್ಕೆ ಅವರು ಸುಮಾರು ೫೦೦೦ ರೂ. ಗಳನ್ನು ದೇಣಿಗೆ ನೀಡಿದರು. ರಾಯಚೂರ ವಾಣಿ ದಿನಪತ್ರಿಕೆ ಸಂಪಾದಕರಾದ ಅರವಿಂದ ಕುಲಕರ್ಣಿ ೫೦೦೦ ರೂ. ಗಳನ್ನು ಹಾಗೂ ಜನ ಕೂಗು ದಿನ ಪತ್ರಿಕೆಯ ಸಂಪಾದಕರಾದ ವೀರಾರೆಡ್ಡಿ ೫೦೦೦ಗಳನ್ನು ದೇಣಿಗೆ ನೀಡುವುದರ ಮೂಲಕ ಮಾನವೀಯತೆ ಮೆರೆದರು. ಈ ಕಾರ್ಯಕ್ರಮದಲ್ಲಿ ಶಿವಾನಂದ ತಗಡೂರು ಅವರನ್ನು ಕಾರುಣ್ಯ ಆಶ್ರಮದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಒಳಬಳ್ಳಾರಿ ಶ್ರೀ ಚನ್ನಬಸವೇಶ್ವರ ಭಾವಚಿತ್ರವನ್ನು ನೆನಪಿನ ಕಾಣಿಕೆಯಾಗಿ ನೀಡಲಾಯಿತು.
ಸಿಂಧನೂರು ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಡಿ.ಎಚ್. ಕಂಬಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎಚ್.ಭಾಷಾ ಜಿಲ್ಲಾ ಉಪಾಧ್ಯಕ್ಷರಾದ ವೀರಭದ್ರಪ್ಪ ಬಸವ ಕೇಂದ್ರದ ಸದಸ್ಯರಾದ ಬಸಲಿಂಗಪ್ಪ ಬಾದರ್ಲಿ, ಕಾರುಣ್ಯ ಆಶ್ರಮದ ಕಾರ್ಯಾಧ್ಯಕ್ಷರಾದ ವೀರೇಶ ಯಡಿಯೂರು ಮಠ ಆಡಳಿತ ಅಧಿಕಾರಿಗಳಾದ ಚನ್ನಬಸಯ್ಯಸ್ವಾಮಿ, ವ್ಯವಸ್ಥಾಪಕರಾದ ಶೇಖರಯ್ಯ ಸ್ವಾಮಿ ಗೊರೆಬಾಳ ಆದರ್ಶ ವಿದ್ಯಾಲಯದ ಶಾಲಾ ಮೇಲುಸ್ತುವಾರಿ ಅಧ್ಯಕ್ಷರಾದ ನೀಲ ಸಂಗಮೇಶ ಅಲಬನೂರು, ಕಾರುಣ್ಯ ಆಶ್ರಮದ ಸಿಬ್ಬಂದಿಗಳಾದ ಸುಜಾತ. ಅಮರೇಶ. ದೇವಮ್ಮ. ಇನ್ನೂ ಅನೇಕರು ಉಪಸ್ಥಿತರಿದ್ದರು.