ಕಾರುಣ್ಯಾಶ್ರಮಕ್ಕೆ ಹರಿದು ಬಂದ ದವಸ ಧಾನ್ಯ.

(ಸಂಜೆವಾಣಿ ವಾರ್ತೆ)
ಸಿಂಧನೂರು.ಜ.೨೯- ತಾಲೂಕಿನ ಹರೇಟನೂರು ಗ್ರಾಮದಿಂದ ಜೋಳ, ಅಕ್ಕಿ ಆಶ್ರಮದಲ್ಲಿನ ನಿರಾಶ್ರಿತರಿಗೆ ಕ್ವಿಂಟಲ್ ರೂಪದಲ್ಲಿ ಕೊಟ್ಟಿದ್ದಾರೆ.
ಕಾರುಣ್ಯ ಕುಟುಂಬದ ಜನ್ಮಸ್ಥಳವಾದ ಹರೇಟನೂರು ಗ್ರಾಮದ ನಾಗಪ್ಪ ದೇವರಮನಿ ೭೫ ಕೆ.ಜಿ. ಜೋಳ, ಹನುಮಂತಪ್ಪ ನಾಗಲಾಪುರ ೭೫ ಕೆ.ಜಿ. ಜೋಳ, ದೇವಣ್ಣ ದೇವರಮನಿ ೩೦ ಕೆ.ಜಿ. ಜೋಳ, ಅಯ್ಯಪ್ಪ ದೇವರಮನಿ ೧೫ ಕೆ.ಜಿ. ಜೋಳ ಮತ್ತು ಅಲಬನೂರು ಗ್ರಾಮದ ಅಮರೇಶ ರಂಗಾಪುರ ೩೦ ಕೆ.ಜಿ. ಅಕ್ಕಿಯನ್ನು ವಿತರಿಸಿ ಕಾರುಣ್ಯ ಕುಟುಂಬ ವಾಸಿಗಳಿಗೆ ಹಸಿವು ನೀಗಿಸಲು ಸಹಾಯ ಮಾಡುವುದರ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ದಾನಿಗಳಿಗೆ ಕಾರುಣ್ಯ ಆಶ್ರಮದ ಎಲ್ಲಾ ಪದಾಧಿಕಾರಿಗಳು ಹಾಗೂ ಆಶ್ರಯದಾತರುಗಳ ಪತ್ರಿಕೆ ಮೂಲಕ ಧನ್ಯವಾದಗಳನ್ನು ತಿಳಿಸಿದರು.