ಕಾರುಗಳ ಮಧ್ಯೆ ಡಿಕ್ಕಿ ಇಬ್ಬರು ಚಾಲಕರು ಸಾವು

ಬೆಂಗಳೂರು,ಸೆ.೨೬-ತಪ್ಪು ದಾರಿಯಲ್ಲಿ ( ರಾಂಗ್ ರೂಟ್) ನ ಬಂದ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟ ದಾರುಣ ಘಟನೆ ಆನೇಕಲ್ ನ ಸೂಳಗಿರಿಯಲ್ಲಿ ನಡೆದಿದೆ. ವೈಯಾಲಿಕಾವಲ್ ನ ಹಾಗೂ ಸುಮಂತ್ (೨೧) ಕೋರಮಂಗಲದ ವಿನ್ಸೆಂಟ್ ಗೋಪಿ (೩೪) ಮೃತ ದುರ್ದೈವಿಗಳು.
ಕರ್ನಾಟಕದ ಗಡಿಗೆ ಹೊಂದಿಕೊಂಡಿ ರುವ ತಮಿಳುನಾಡು ಹೊಸೂರು ಸಮೀಪದ ಸೂಳಗಿರಿ ಎಚ್.ಪಿ ಪೆಟ್ರೋಲ್ ಬಂಕ್ ಎದುರು ಈ ಭೀಕರ ಅಪಘಾತ ಸಂಭವಿಸಿ ನಡೆದ ಈ ದುರ್ಘಟನೆಯಲ್ಲಿ ಮೃತಪಟ್ಟ ಇಬ್ಬರು ಎರಡು ಕಾರುಗಳ ಚಾಲಕರಾಗಿದ್ದಾರೆ.
ಹೆದ್ದಾರಿಯಲ್ಲಿ ವೇಗವಾಗಿ ಬರುತ್ತಿದ್ದ ಇಂಡಿಕಾ ಕಾರಿಗೆ ರಾಂಗ್ ರೂಟ್‌ನಲ್ಲಿ ಬಂದ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಸೂಳಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.