ಕಾರುಗಳ ಅಕ್ರಮ ನೋಂದಣಿ: ಸಿಬಿಐ ತನಿಖೆಗೆ ರೈತ ಸಂಘ ಆಗ್ರಹ

ಕೆ.ಜಿ.ಎಪ್ ,ಜೂ.೨೩- ಅಂತರಾಜ್ಯ ಐಷಾರಾಮಿ ಕಾರುಗಳ ಆಕ್ರಮ ನೊಂದಣಿ ಹಾಗೂ ನಕಲಿ ಬೋನಪೈಡ್ ಹಗರಣವನ್ನು ಸಿ.ಬಿ.ಐಗೆ ಒಪ್ಪಿಸಬೇಕೆಂದು ರೈತ ಸಂಘದಿಂದ ಆರ್.ಟಿ.ಒ ಕಚೇರಿಯ ಮುಂದೆ ಹೋರಾಟ ಮಾಡಿ ಸಾರಿಗೆ ಹಾಗೂ ಕಂದಾಯ ಮಂತ್ರಿಗಳಿಗೆ ಅಧಿಕಾರಿಗಳ ಮನವಿ ನೀಡಿ ಒತ್ತಾಯಿಸಿಲಾಯಿತು.
ಲಕ್ಷ ಲಕ್ಷ ಸಂಬಳ ಪಡೆದು ಜನಸಾಮಾನ್ಯರ ಕೆಲಸವನ್ನು ಲಂಚವಿಲ್ಲದೆ ಮಾಡುವ ಜೊತೆಗೆ ಸರ್ಕಾರಕ್ಕೆ ಆದಾಯ ಒದಗಿಸ ಬೇಕಾದ ಇಲಾಖೆಯ ಗುರು ಹಾಗೂ ಆನಂದಮೂರ್ತಿ ರವರು ಹೊರರಾಜ್ಯದ ಐಷಾರಾಮಿ ಕಾರುಗಳ ಮುಖಬೆಲೆ ಕಡಿಮೆ ಮಾಡಿ ಸರ್ಕಾರಕ್ಕೆ ತೆರಿಗೆಯನ್ನು ವಂಚನೆ ಮಾಡಿ ದಲ್ಲಾಳಿಗಳಿಗೆ ಶೋರೂಂ, ಮಾಲೀಕರ ಕೈಗೊಂಬೆಯಂತೆ ಕೆಲಸ ನಿರ್ವಹಿಸುವ ಇಲಾಖೆಯ ಅಧಿಕಾರಿಗಳ ಭ್ರಷ್ಟಚಾರತೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಇಲಾಖೆಯ ಭ್ರಷ್ಟಚಾರ ಒಂದಾ ಎರಡಾ ಬಗೆದಷ್ಟು ಹಗರಣಗಳು ಹೊರ ಬೀಳುತ್ತಿವೆ ಡಿಲ್ ನಿಂದ ಹಿಡಿದು ದಲ್ಲಾಳಿಗಳ ನೆರಳಿಲ್ಲದೆ ಕೈಗೆ ಲಂಚ ಕೊಡದೆ ಜನಸಾಮಾನ್ಯರ ನೆರಳು ಸಹ ಇಲಾಖೆಯ ಬಾಗಿಲು ಬೀಳುವಂತಿಲ್ಲ ಅಷ್ಟರ ಮಟ್ಟಿಗೆ ಇಲಾಖೆ ಹಗರಣ ತೆಲಗಿ ಚಾಪಾಕಾಗದ ಹಗರಣವನ್ನು ಮೀರಿಸುತ್ತಿದ್ದರೂ ಹಿರಿಯ ಅಧಿಕಾರಿಗಳು ಮೌನವಾಗಿರುವುದಕ್ಕೆ ಕಿರಿಯ ಅಧಿಕಾರಿಗಳ ಸಂಪಾದನೆಯಲ್ಲಿ ಹಿರಿಯ ಅಧಿಕಾರಿಗಳಿಗೂ ಸಮಪಾಲಿದೆ ಎಂದು ಆರೋಪಿಸಿದರು.
ರೈತರು ಕಂದಾಯ ಇಲಾಖೆಗೆ ಪರಿಹಾರಕ್ಕಾಗಿ ಕೊಡುವ ದಾಖಲೆಗಳನ್ನು ದುರುಪಯೋಗ ಪಡಿಸಿಕೊಳ್ಳುವ ಜೊತೆಗೆ ಸರ್ಕಾರಿ ಕೆರೆ, ಗೋಮಾಳ, ಗುಂಡುತೋಪು ಸ್ಮಶಾನ ಭೂಮಿಗಳಿಗೆ ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ ಟ್ರಾಕ್ಟರ್ ಶೋ ರೂಂ ಮಾಲೀಕರು ದಲ್ಲಾಳಿಗಳ ಜೊತೆ ಶಾಮೀಲಾಗಿ ಪ್ರತಿ ಬೋನಪೈಡ್‌ಗೆ ೧೦ ರಿಂದ೫೦ ಸಾವಿರ ಲಂಚ ಪಡೆದು ನಾಡಕಚೇರಿಗಳಲ್ಲಿನ ಉಪ ತಹಶೀಲ್ದಾರ್‌ಗಳು ಹಾಗೂ ಆರ್.ಟಿ.ಒ ಕಚೇರಿಯಲ್ಲಿನ ಸಿಬ್ಬಂದಿ ನಕಲಿ ಬೋನಪೈಡ್ ಪ್ರಮಾಣ ಪತ್ರ ರೂವಾರಿಗಳಾಗಿ ಬೆಳಗಾಂ ರೈತರಿಗೆ ಕೋಲಾರದಲ್ಲಿ ಬೋನಪೈಡ್ ಪ್ರಮಾಣ ಪತ್ರ ನೀಡಿ ಟ್ರಾಕ್ಟರ್ ನೊಂದಣಿ ಮಾಡುವ ದಂದೆ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆಯುವ ಇಲಾಖೆಯಾಗಿ ಆರ್.ಟಿ.ಒ ಕಚೇರಿ ಮಾರ್ಪಟ್ಟಿದೆ ಎಂದು ಕಿಡಿಕಾರಿದರು.
ಕೆ.ಜಿ.ಎಪ್ ತಾಲ್ಲೂಕಾದ್ಯಕ್ಷ ರಾಮಸಾಗರ ವೇಣುರವರು ಮಾತನಾಡಿ ಸರ್ಕಾರಿ ನೌಕರಿ ಪಡೆಯಬೇಕಾದರೆ ಕಡ್ಡಾಯವಾಗಿ ಎಲ್ಲಾ ದಾಖಲೆಗಳನ್ನು ಸಂಬಂದಪಟ್ಟ ಇಲಾಖೆಯ ಅಧಿಕಾರಿಗಳು ಪರಿಶೀಲನೆ ಮಾಡುತ್ತಾರೆ ಆದರೆ ಆರ್.ಟಿ.ಒ ಕಚೇರಿಯಲ್ಲಿ ನಾಡಕಚೇರಿಗಳಿಂದ ಬಂದಂತಹ ದಾಖಲೆಗಳನ್ನು ಪರೀಶೀಲನೆ ಮಾಡದೆಯೇ ಕಣ್ಣು ತೆರೆದು ನೋಡದೆ ಬೋನಪೈಡ್ ಪ್ರಮಾಣ ಪತ್ರ ನಕಲಿ ಆಗಿದ್ದರು ನೊಂದಣಿ ಮಾಡುವ ಮೂಲಕ ಐಷಾರಾಮಿ ಜೀವನ ಅಧಿಕಾರಿಗಳು ನಡೆಸುತ್ತಿದ್ದಾರೆಂದು ಅವ್ಯವಸ್ಥೆಯ ವಿರುದ್ದ ಗುಡುಗಿದರು.
ಒಂದು ಕಡೆ ಅಂತರ್‌ರಾಜ್ಯ ಐಷಾರಾಮಿ ಕಾರುಗಳ ಮುಖಬೆಲೆ ಕಡಿಮೆ ದಂದೆ ಮತ್ತೊಂದು ಕಡೆ ನಕಲಿ ಬೊನಪೈಡ್ ದಂದೆ ಈ ಎರಡನ್ನು ಮೀರಿಸುವ ಮೂರನೇ ದಂದೆ ಎಂದರೆ ಹೊರ ರಾಜ್ಯದಿಂದ ಕಳ್ಳತನದಿಂದ ಬರುವ ಸ್ಕೂಲ್ ಬಸ್ಸುಗಳು, ಟ್ರಾಕ್ಟರ್‌ಗಳು, ಕಾರುಗಳ ಚಾರ್ಸಿ ನಂಬರ್‌ಗಳನ್ನೇ ಬದಲಾವಣೆ ಮಾಡಿ ನೊಂದಣಿ ಮಾಡಿರುವ ಪ್ರಕರಣ ಗಂಬೀರವಾಗಿ ಪರಿಗಣಿಸಬೇಕೆಂಧು ಒತ್ತಾಯಿಸಿದರು.
೨೪ ಗಂಟೆಯಲ್ಲಿ ಅಂತರಾಜ್ಯ ಐಷಾರಾಮಿ ಕಾರುಗಳ ಆಕ್ರಮ ನೊಂದಣಿ ಹಾಗೂ ನಕಲಿ ಬೋನಪೈಡ್ ಹಗರಣವನ್ನು ಸಿ.ಬಿ.ಐಗೆ ಒಪ್ಪಿಸಬೇಕೆಂದು ಹಾಗೂ ಇದರಲ್ಲಿ ಶಾಮೀಲಾಗಿರುವ ಅಧಿಕಾರಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಇಲಾಖೆಯ ಮರ್ಯಾದೆಯನ್ನು ಉಳಿಸಬೇಕೆಂದು ಮನವಿ ನೀಡಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಆರ್.ಟಿ.ಒ ಅಧಿಕಾರಿಗಳು ಮಾತನಾಡಿ ನಿಮ್ಮ ಮನವಿಯನ್ನು ಸರ್ಕಾರಕ್ಕೆ ಕಳುಹಿಸುವ ಜೊತೆಗೆ ನೀವು ಮಾಡಿರುವ ಆರೋಪವನ್ನು ಸೂಕ್ತ ಅಧಿಕಾರಿಗಳಿಂದ ತನಿಖೆ ಮಾಡುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ರಾಮಸಾಗರ ಸುರೇಶ್‌ಬಾಬು, ಕಿರಣ್, ಪಾರಂಡಹಳ್ಳಿ ಮಂಜುನಾಥ್, ನಾಗಭೂಷನ್, ಮಾ.ತಾ.ಅ ಯಲ್ಲಪ್ಪ, ಹರೀಶ್, ಬಂಗಾರಪೇಟೆ ತಾ.ಅ ಕದರಿನತ್ತ ಅಪ್ಪೋಜಿರಾವ್, ಲಕ್ಷಣ್, ಮಂಗಸಂದ್ರ ತಿಮ್ಮಣ್ಣ, ಯಾರಂಘಟ್ಟ ಗಿರೀಶ್, ಕಾಮಸಮುದ್ರ ಮುನಿಕೃಷ್ಣ, ವಿಶ್ವ, ಮುನಿರಾಜು, ಚಾಂದ್‌ಪಾಷ, ಹಸಿರುಸೇನೆ ಜಿಲ್ಲಾದ್ಯಕ್ಷ ಕಿರಣ್ ಮುಂತಾದವರಿದ್ದರು.