ಕಾರುಗಳಿಗೆ 6 ಬ್ಯಾಗ್ ಕಡ್ಡಾಯ:ಗಡ್ಕರಿ

ನವದೆಹಲಿ, ಆ.5-ಕಾರುಗಳಲ್ಲಿ ಆರು ಏರ್ ಬ್ಯಾಗ್ ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ರಾಜ್ಯಸಭೆಗೆ ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ, ಪ್ರತಿ ಏರ್ ಬ್ಯಾಗ್ ದರ 800 ರೂ ವೆಚ್ಚವಾಗಲಿದೆ. ಇನ್ನು ಮುಂದೆ ಆಟೊ ಮೊಬೈಲ್ ಉತ್ಪಾದಕರಿಗೆ ಕಾರುಗಳಲ್ಲಿ ಆರು ಏರ್ ಬ್ಯಾಗ್ ಕಡ್ಡಾಯಗೊಳಿಸಿ ಸುರಕ್ಷತಾ ಕ್ರಮ ಹೆಚ್ಚಿಸುವಂತೆ ಸೂಚಿಸಲಿದೆ ಎಂದು ತಿಳಿಸಿದರು.
ಕಡ್ಡಾಯ ಆರು ಏರ್ ಬ್ಯಾಗ್ ಕಡ್ಡಾಯಗೊಳಿಸಿ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಹೇಳಿದರು.
ದೇಶದಲ್ಲಿ ಪ್ರತಿ ವರ್ಷ ಲಕ್ಕಕ್ಕೂ ಹೆಚ್ಚು ಮಂದಿ ಅಪಘಾತದಲ್ಲಿ ಬಲಿಯಾಗುತ್ತಿದ್ದಾರೆ. ಅಪಘಾತಗಳನ್ನು ತಡೆಯುವ ಉದ್ದೇಶದಿಂದ ವಿವಿಧ ಮಾದರಿಯ ಕಾರುಗಳಿಗೆ ಶ್ರೇಣಿಯನ್ನು ನೀಡಲು ನಿರ್ಧರಿಸಲಾಗಿದೆ ಎಂದು ಸಚಿವರು ವಿವರಿಸಿದರು.