ಕಾರಿನಲ್ಲೇ ಅನುಮಾನಾಸ್ಪದ ವ್ಯಕ್ತಿ ಸಾವು

ಮಂಡ್ಯ, ನ.7: ವ್ಯಕ್ತಿಯೊಬ್ಬ ಕಾರಿನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಗರದ ಜನರಲ್ ಆಸ್ಪತ್ರೆ ರಸ್ತೆಯಲ್ಲಿ ನಡೆದಿದೆ.
ಮಳವಳ್ಳಿ ತಾಲೂಕು ಕಿರುಗಾವಲು ಗ್ರಾಮದ ಶಶಿಕುಮಾರ್(44) ಎಂಬಾತನೇ ಮೃತಪಟ್ಟವನಾಗಿದ್ದಾನೆ. ಈತ ಕಳೆದ ನ.4ರಂದು ತನ್ನ ಸ್ನೇಹಿತ ಟಿ.ನರಸೀಪುರದ ಆನಂದ್‍ಕುಮಾರ್ ಎಂಬುವವರಿಂದ ಮಾರುತಿ ಕಾರು (ಕೆ.ಎ. 11-1798) ಪಡೆದು ಬೆಂಗಳೂರಿಗೆ ಹೋಗಿ ಬರುವುದಾಗಿ ತಿಳಿಸಿ ತೆರಳಿದ್ದಾನೆ.
ಎರಡು ದಿನ ಕಳೆದರೂ ಶಶಿಕುಮಾರ್ ಬಾರದಿರುವುದನ್ನು ಕಂಡ ಆನಂದ್‍ಕುಮಾರ್ ಇತರರು ಮಂಡ್ಯ, ಮೈಸೂರು ಸೇರಿದಂತೆ ವಿವಿಧೆಡೆ ವಸತಿಗೃಹ ಇತರೆಡೆ ಹುಡುಕಾಟ ನಡೆಸಿದ್ದಾರೆ. ಆದರೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಇಂದು ಬೆಳಗ್ಗೆ ಕಳೆದ ಮೂರು ದಿನಗಳಿಂದ ಮಾರುತಿ ಕಾರೊಂದು ಅನುಮಾನಾಸ್ಪದವಾಗಿ ನಿಂತಿದ್ದು, ಕಾರಿನಿಂದ ವಾಸನೆ ಬರುತ್ತಿರುವ ಬಗ್ಗೆ ಸ್ಥಳೀಯರು ಪೆÇಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೆÇಲೀಸರು ಕಾರಿನ ನಂಬರ್ ಆಧಾರದ ಮೇರೆಗೆ ಆನಂದ್‍ಕುಮಾರ್ ಅವರ ವಿಳಾಸ ಪತ್ತೆಹಚ್ಚಿ ಮಾಹಿತಿ ನೀಡಿದ್ದಾರೆ. ಶಶಿಕುಮಾರ್ ಕಾರಿನೊಳಗೇ ಸಾವನ್ನಪ್ಪಿದ್ದಾನೆ. ಶವವನ್ನು ವಶಕ್ಕೆ ಪಡೆದ ಪೆÇಲೀಸರು ಜಿಲ್ಲಾ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿದರು. ಈ ಸಂಬಂಧ ಪೂರ್ವ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.