ಕಾರಿನಲ್ಲಿ ಪಯಣ: ಒಬ್ಬರಿದ್ದರೆ ಮಾಸ್ಕ್ ಅಗತ್ಯವಿಲ್ಲ

ಬೆಂಗಳೂರು, ನ.೩-ಕಾರಿನಲ್ಲಿ ಒಬ್ಬರೇ ಪ್ರಮಾಣಿಸುವಾಗ ಕಿಟಕಿ ಗಾಜು ಮುಚ್ಚಿದ್ದರೆ ಮಾಸ್ಕ್ ಧರಿಸುವ ಅವಶ್ಯಕತೆ ಇಲ್ಲ ಎಂದು ಬಿಬಿಎಂಪಿ ಸ್ಪಷ್ಟನೆ ನೀಡಿದೆ.
ಈ ಕುರಿತು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಪರಿಷ್ಕೃತ ಆದೇಶ ಹೊರಡಿಸಿದ್ದು, ಕಾರಿನಲ್ಲಿ ಒಬ್ಬರೇ ಪ್ರಮಾಣಿಸುವಾಗ ಕಿಟಕಿ ಗಾಜು ಮುಚ್ಚಿದ್ದರೆ ಮಾಸ್ಕ್ ಅಗತ್ಯತೆ ಇಲ್ಲ.ಆದರೆ ಆದರೆ ಬೈಕ್‌ನಲ್ಲಿ ಒಬ್ಬರೇ ಪ್ರಯಾಣಿಸುವಾಗಲೂ ಮಾಸ್ಕ್ ಧರಿಸಬೇಕು ಎಂಬ ಆದೇಶವನ್ನು ಮುಂದುವರೆಸಲಾಗಿದೆ.
ಇತ್ತೀಚಿಗೆ ಕಾರಿನಲ್ಲಿ ಒಬ್ಬರೇ ಇದ್ದರೂ ಮಾಸ್ಕ್ ಕಡ್ಡಾಯ ಎನ್ನುವ ಬಿಬಿಎಂಪಿ ನಿಯಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಕೊರೋನಾ ನಿಯಂತ್ರಣ ತಜ್ಞರ ಸಮಿತಿ ಸಭೆಯಲ್ಲಿ ಕಾರಿನಲ್ಲಿ ಒಬ್ಬರೇ ಪ್ರಮಾಣಿಸುವಾಗ ಕಿಟಕಿ ಗಾಜು ಮುಚ್ಚಿಕೊಂಡಿದ್ದರೆ ಮಾಸ್ಕ್ ಧರಿಸುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.