ಕಾರಿನಲ್ಲಿ ಗಾಂಜಾ ಸಾಗಾಣೆ : ಓರ್ವನ ಬಂಧನ


ಶಿವಮೊಗ್ಗ, ಜು. 27: ಶಿವಮೊಗ್ಗ ಜಿಲ್ಲೆ ಸೊರಬ ಠಾಣೆ ಪೊಲೀಸರು ಕಾರಿನಲ್ಲಿ ಗಾಂಜಾ ಸಾಗಾಣೆ ಮಾಡುತ್ತಿದ್ದ ಆರೋಪಿಯೋರ್ವನನ್ನು ಬಂಧಿಸಿದ ಘಟನೆ ನಡೆದಿದೆ.
ಖಚಿತ ವರ್ತಮಾನದ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿಯಿಂದ 1 ಕೆಜಿ 170 ಗ್ರಾಂ ತೂಕದ ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.