ಕಾರಿನಲ್ಲಿ ಗಾಂಜಾ ಸಾಗಾಟ ೮ ಕೆ.ಜಿ. ಗಾಂಜಾ ಸಹಿತ ಇಬ್ವರು ವಶಕ್ಕೆ

ಸುಳ್ಯ, ನ.೭- ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಸುಳ್ಯ ಪೋಲೀಸರು ಅವರಿಂದ ೮ ಕೆ.ಜಿ. ಗಾಂಜಾ ಹಾಗೂ ಸಾಗಾಟಕ್ಕೆ ಬಳಸಿದ ಕಾರನ್ನು ಪೋಲೀಸರು ವಶ ವಶಪಡಿಸಿಕೊಂಡ ಘಟನೆ ನಡೆದಿದೆ. ಕಾಸರಗೋಡು ಮುಂಡೋಳು ಅಟ್ಟಂಚಾಲ್ನ ಮುರುವ ಮನೆ ಎಮ್ ಎ ಅಬ್ಬಾಸ್ (೬೩), ಹಾಗೂ ಕಾಸರಗೋಡು ಮೊಯಿನಾಬಾದ್ ಅಬ್ದುಲ್ ಕುನ್ನಿ (೫೦) ಬಂದಿತ ಆರೋಪಿಗಳು. ಸರ್ಕಲ್ ಇನ್ಸ್‌ಪೆಕ್ಟರ್ ನವೀನ್‌ಚಂದ್ರ ಜೋಗಿಯವರ ಮಾರ್ಗದರ್ಶನದಲ್ಲಿ ಎಸ್.ಐ. ಹರೀಶ್ ಎಂ.ಆರ್. ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು. ೮ ಕೆ.ಜಿ. ೨೦೦ ಗ್ರಾಂ ಗಾಂಜಾದ ಮೌಲ್ಯ ೨ ಲಕ್ಷ ಎಂದು ಅಂದಾಜಿಸಲಾಗಿದ್ದು, ಆರೋಪಿಗಳು ಬಳಸಿದ ಸ್ವಿಫ್ಟ್ ಕಾರುನ್ನು ವಶ ಪಡಿಸಿಕೊಳ್ಳಲಾಗಿದೆ.