ಕಾರಿನಲ್ಲಿ ಕಳ್ಳ ಸಾಗಣೆ 25 ಕೆ.ಜಿ ಚಿನ್ನ ವಶ

ಯಾದಾದ್ರಿ ಭುವನಗಿರಿ(ತೆಲಂಗಾಣ),ಮಾ.24- ಕಾರಿನಲ್ಲಿ ಕಳ್ಳ ಸಾಗಣೆ ಮಾಡುತ್ತಿದ್ದ 25 ಕೆ.ಜಿ ಚಿನ್ನವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ ( ಡಿಆರ್​ಐ) ವಶಪಡಿಸಿಕೊಂಡು ಮೂವರನ್ನು ಬಂಧಿಸಿರುವ ಘಟನೆ ಜಿಲ್ಲೆಯ ಪಟಂಗಿ ಟೋಲ್ ಪ್ಲಾಝಾದಲ್ಲಿ ನಡೆದಿದೆ.
ಗುವಾಹಟಿಯಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ಕಾರಿನಿಂದ ಚಿನ್ನದ ಬಿಸ್ಕೇಟ್​ಗನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ ಸುಮಾರು 11.63 ಕೋಟಿ ಎಂದು ಅಂದಾಜಿಸಲಾಗಿದೆ.
ಕಾರಿನಲ್ಲಿದ್ದ 1 ಕೆ.ಜಿ ಚಿನ್ನದ ಗಟ್ಟಿ ಸೇರಿದಂತೆ 25ಕೆಜಿ ಚಿನ್ನವನ್ನು ಕಾರಿನ ಡ್ಯಾಶ್​ ಬೋರ್ಡ್​ನಿಂದ ವಶಪಡಿಸಿಕೊಳ್ಳಲಾಗಿದೆ.
ಮುಂಭಾಗದ ಸೀಟಿನ ಬಳಿಯ ಏರ್​ ಬ್ಯಾಗನ್ನು ತೆಗೆದು, ಅಲ್ಲಿ ಚಿನ್ನ ಇಟ್ಟು ಯಾರಿಗೂ ಗೊತ್ತಾಗದ ಹಾಗೆ ಫೆವಿಸ್ಟಿಕ್​ನಿಂದ ಡ್ಯಾಶ್​ ಬೋರ್ಡ್ ಮುಚ್ಚಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟು 11.63 ಮೌಲ್ಯದ 25 ಕೆ.ಜಿ ಚಿನ್ನ ಮತ್ತು ಕಳ್ಳಸಾಗಣೆಗೆ ಬಳಸಿದ ಕಾರನ್ನು ವಶಪಡಿಸಿಕೊಂಡು ಕಸ್ಟಮ್ ಕಾಯ್ದೆ 162 ರ ಅಡಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ಮುಂದುವರೆದಿದೆ ಎಂದು ಡಿಆರ್​ಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ