ಕಾರಿನಲ್ಲಿದ್ದವರ  ಪ್ರಾಣ ಉಳಿಸಲು ಹೋಗಿ,ತನ್ನ ಪ್ರಾಣ ಕಳಕೊಂಡ ಲಾರಿ ಚಾಲಕ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜೂ 22 :- ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರಿನಲ್ಲಿದ್ದ ಗಾಯಾಳುಗಳನ್ನು ಕಾಪಾಡಲು ಹೋದ ಲಾರಿಯ ಚಾಲಕ ಕಂಬದಿಂದ ಬಿದ್ದ ವಿದ್ಯುತ್ ಸ್ಪರ್ಶವಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ಕೂಡ್ಲಿಗಿ ಸಮೀಪದ ಹೈವೇ 50ರಲ್ಲಿ ಜರುಗಿದೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮ್ಯಾದಗೇರಿ ಗ್ರಾಮದ ದೇವರಾಜ (32) ಮೃತಪಟ್ಟ ದುರ್ದೈವಿ ಲಾರಿ ಚಾಲಕನಾಗಿದ್ದಾನೆ ಎಂದು ಹೇಳಲಾಗುತ್ತಿದೆ.ಈತನು ಲಾರಿಯನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ್ಗೆ ಬೆಂಗಳೂರು ಕಡೆಯಿಂದ ಹೊಸಪೇಟೆ ಕಡೆ ಹೊರಟಿದ್ದ ಕಾರಿನ ಚಾಲಕನ ನಿಯಂತ್ರಣ ತಪ್ಪಿ ತಾಲೂಕಿನ ಶಿವಪುರ ಸಮೀಪದ ಶ್ರೀವೈಷ್ಣವಿ ಪೌಲ್ಟ್ರಿ ಫಾರಂ ಹತ್ತಿರದ ರಸ್ತೆಯ ಬಳಿ ತಗ್ಗಿಗಿಳಿದ ಕಾರು ಅಲ್ಲೇ ಇದ್ದ ಕಾರನ್ನು ಹಾಗೂ ಅದರಲ್ಲಿದ್ದವರನ್ನು ಅದೇ ಸಂದರ್ಭದಲ್ಲಿ ಹೋರಾಟ ಲಾರಿ ಚಾಲಕ ದೇವರಾಜ ಎಂಬಾತನು ಲಾರಿ ನಿಲ್ಲಿಸಿ ಕಾರು ಅಪಘಾತದಿಂದ ಆ ಕಾರಿನಲ್ಲಿದ್ದವರನ್ನು ರಕ್ಷಿಸಲು ದೌಡಯಿಸಿದಾಗ ಕಾರಿನ ರಭಸದ ಡಿಕ್ಕಿಯಿಂದ ವಿದ್ಯುತ್ ಕಂಬ ಬಿದ್ದಿದ್ದು ಅದರಲ್ಲಿದ್ದ ವಿದ್ಯುತ್ ತಂತಿಗಳು ಹರಿದುಬಿದ್ದಿದ್ದು ಕಾರಿನಲ್ಲಿದ್ದವರ ಪ್ರಾಣ ಉಳಿಸಲು ದೌಡಾಯಿಸುತ್ತಿರುವಾಗ ಲಾರಿ ಚಾಲಕನಿಗೆ ವಿದ್ಯುತ್ ಸ್ಪರ್ಶವಾಗಿ ಸ್ಥಳದಲ್ಲೇ ಮೃತಪಟ್ಟಿರಬಹುದು ಎಂದು ಹೇಳಲಾಗುತ್ತಿದ್ದು ಮೃತನ ಸಹೋದರ ಹನುಮಪ್ಪ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.