ಕಾರಿಗೆ ಲಾರಿ ಡಿಕ್ಕಿ
ಗ್ರಾಮೀಣ ಬ್ಯಾಂಕ್ ನೌಕರ ಸಾವು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ತಾಲೂಕಿನ ಹಲಕುಂದಿ ಬಳಿ ನಿನ್ನೆ ಮಧ್ಯಾಹ್ನ ಲಾರಿ ಕಾರಿಗೆ ಡಿಕ್ಕಿ ಹೊಡೆದ ಸಂಬಂಧ  ದಾವಣಗೆರೆಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರ ಸಾವನ್ನಪ್ಪಿರುವ ಘಟನೆ ನಡೆದಿದೆ.
ಸ್ವಿಫ್ಟ್ ಕಾರಿನಲ್ಲಿ ಚಾಲಕ ರಘುವೀರ್ ಜೊತೆ ದಾವಣಗೆರೆಯಿಂದ ಬಂದ  ರಾಘವೇಂದ್ರ (35) ಬಳ್ಳಾರಿಯಲ್ಲಿ ಬ್ಯಾಂಕ್ ಕೆಲಸ ಮುಗಿಸಿಕೊಂಡು ದಾವಣಗೆರೆಗೆ ಹೋಗುತ್ತಿರುವಾಗ ಎದುರಿಗೆ ಬಂದ
ಕಠಾರಿಯ ಕಂಪನಿ ಲಾರಿ ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ರಾಘವೇಂದ್ರ ಅವರು ನಿನ್ನೆ ರಾತ್ರಿ ವಿಮ್ಸ್ ನಲ್ಲಿ ಸಾವನ್ನಪ್ಪಿದ್ದಾರೆ
ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾಲಕನ ನಿಯಂತ್ರಣ ತಪ್ಪಿದ ಲಾರಿ ಪಕ್ಕದಲ್ಲಿದ್ದ ರೈಲ್ವೇ ಟ್ರಾಕ್ ಮೇಲೆ ಹೋಗಿ ನಿಂತಿದೆ.