ಕಾರಿಗೆ ಬೆಂಕಿ ಮನೆ ಧಗಧಗ

ಬೆಂಗಳೂರು,ನ.೧೮- ಮನೆಯ ಗೇಟ್ ಮುಂಭಾಗ ನಿಲ್ಲಿಸಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡು ಉರಿಯುತ್ತಿದ್ದ ಕಾರನ್ನು ಅಗ್ನಿಶಾಮಕ ಸಿಬ್ಬಂದಿ ನಂದಿಸುವಾಗ ಸ್ಫೋಟ ಸಂಭವಿಸಿರುವ ಘಟನೆ ಇಟ್ಟಮಡು ಬಳಿಯ ಮಂಜುನಾಥ ನಗರದಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದೆ.
ಅಗ್ನಿಶಾಮಕ ಸಿಬ್ಬಂದಿಯು ಬೆಂಕಿ ನಂದಿಸುತ್ತಿದ್ದ ವೇಳೆ ಸ್ಫೋಟ ಸಂಭವಿಸಿ ಕೂದಲೆಳೆ ಅಂತರದಲ್ಲಿ ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಂಕಿಯಿಂದ ಒಂದು ಕಾರು, ಎರಡು ಬೈಕ್ ಸುಟ್ಟು ಭಸ್ಮಗೊಂಡಿವೆ.
ಕಾರು ಭಸ್ಮ ಪ್ರಕರಣದಲ್ಲಿ ಮೊದಲು ಮನೆಯಲ್ಲಿದ್ದ ಯುಪಿಎಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಬೆಂಕಿಯ ಜ್ವಾಲೆಗಳು ಇಡೀ ಮನೆಯನ್ನೇ ಆವರಿಸಿದೆ. ಬಳಿಕ ಕಾಂಪೌಂಡ್‌ನಲ್ಲಿ ನಿಲ್ಲಿಸಿದ್ದ ಕಾರಿಗೂ ಬೆಂಕಿ ಹೊತ್ತಿಕೊಂಡಿದೆ. ಕಾರಿಗೆ ಬೆಂಕಿ ಹೊತ್ತಿದ ಬಳಿಕ ಸಿಲಿಂಡರ್ ಸ್ಫೋಟಗೊಂಡಿದೆ.
ಸಿಲಿಂಡರ್ ಸ್ಫೋಟದಿಂದ ಮೂವರು ಸಿಬ್ಬಂದಿಗೆ ಗಾಯಗಳಾಗಿದ್ದು ಘಟನೆ ವೇಳೆ ಮನೆಯಲ್ಲಿದ್ದ ಮೂವರು ಅದೃಷ್ಟವಶಾತ್ ಪಾರಾಗಿದ್ದಾರೆ. ಬೆಂಕಿ ಬಿದ್ದ ಕೂಡಲೇ ಟೆರೇಸ್ ಮೂಲಕ ಮನೆಯಿಂದ ಹೊರಕ್ಕೆ ಬಂದಿದ್ದಾರೆ. ಟೆರೇಸ್‌ನಲ್ಲಿದ್ದ ಗೇಟ್ ಒಡೆದ ಈ ಮೂವರೂ, ಪಕ್ಕದ ಬಿಲ್ಡಿಂಗ್‌ಗೆ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ.
ಬೆಂಕಿ ಅವಘಡದಲ್ಲಿ ಮನೆ, ಕಾರು, ಎರಡು ಬೈಕ್ ಸುಟ್ಟು ಭಸ್ಮಗೊಂಡಿವೆ.