ಕಾರಾಗೃಹ ಬಂದಿ ನಿವಾಸಿಗಳಿಗೆ ಉಚಿತ ಸಕ್ರಿಯ ಕ್ಷಯರೋಗ ಆರೋಗ್ಯ ತಪಾಸಣೆ

ಕಲಬುರಗಿ: ಅ. 4: ನಗರದ ಕೇಂದ್ರ ಕಾರಾಗೃಹ ಪ್ರಾಂಗಣದಲ್ಲಿ ಕಾರಾಗೃಹ ಬಂದಿ ನಿವಾಸಿಗಳಿಗೆ ಉಚಿತ ಸಕ್ರಿಯ ಕ್ಷಯರೋಗ ಆರೋಗ್ಯ ತಪಾಸಣೆ ಕಾರ್ಯಕ್ರಮ ಕಲಬುರಗಿ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಾಗೂ ಕಾರಾಗೃಹ ಮತ್ತು ಸುಧಾರಣಾ ಸೇವೆ ಕೇಂದ್ರ ಕಾರಾಗೃಹ ಕಲಬುರಗಿ ಇವರ ಸಹಕಾರದೊಂದಿಗೆ , ಸಕ್ರಿಯ ಕ್ಷಯರೋಗ ಆಂದೋಲನ ಕಾರ್ಯಕ್ರಮ ಗೃಹಬಂದಿ ನಿವಾಸಿಗಳಿಗೆ ಆರೋಗ್ಯದ ಅರಿವು ಮೂಡಿಸುವುದರ ಜೊತೆಗೆ ಕ್ಷಯರೋಗದ ಮಾಹಿತಿ ಕರ ಪತ್ರ ನೀಡಲಾಯಿತು. ಇದಕ್ಕೂ ಮೊದಲು ಜಿಲ್ಲಾ ಹಿರಿಯ ಟಿಬಿ ಆರೋಗ್ಯ ನಿರೀಕ್ಷಣಾಧಿಕಾರಿ ಸಂತೋಷ ಕುಡಳ್ಳಿ ಅವರು ಕ್ಷಯರೋಗದ ಲಕ್ಷಣ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿವರವಾಗಿ ಗೃಹಬಂದಿ ನಿವಾಸಿಗಳಿಗೆ ತಿಳಿಸಿದರು, ನಿಮ್ಮ ಸುತ್ತ ಮುತ್ತಲಿನ ಇರುವ ಜಾಗವನ್ನು ಸ್ವಚ್ಛವಾಗಿ ಇಟ್ಟಿಕೊಳ್ಳಲು ಸಲಹೆ ನೀಡಿದರು . ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದ ಉದ್ದೇಶ 2025 ರಲ್ಲಿ ಕ್ಷಯ ಮುಕ್ತ ಕರ್ನಾಟಕ ಮಾಡುವ ನಿಟ್ಟಿನಲ್ಲಿ, ಜಿಲ್ಲೆಯಲ್ಲಿ ಆಂದೋಲನ ಕಾರ್ಯಕ್ರಮ ಉದ್ದೇಶವಾಗಿದೆ ಅದ ಕಾರಣ, ಸಕ್ರಿಯ ಕ್ಷಯರೋಗದ ಲಕ್ಷಣಗಳುಳ್ಳ ,
ಸಂಶಯಾಸ್ಪದ 27 ವ್ಯಕ್ತಿಗಳ ಕಫ ಮಾದರಿ ಸಂಗ್ರಹ ಮಾಡಿ ಲ್ಯಾಬೋರೇಟರಿ ಕಳಿಸಲಾಯಿತು.
ಜಿಲ್ಲಾ ಡಿ ಆರ್ ಟಿಬಿ ಟಿಸ್ ಸಮಾಲೋಚಕ ಮಂಜುನಾಥ ಕಂಬಾಳಿಮಠ , ಕೇಂದ್ರ ಕಾರಾಗೃಹದ ವೈದ್ಯಧಿಕಾರಿ , ಡಾ|| ರವೀಂದ್ರ ಬನ್ನೇರ, ಹಿರಿಯ ಕ್ಷಯರೋಗ ಮೇಲ್ವಿಚಾರಕಿ ರಜನಿ ಟಿಳ್ಳೆ. ಹಿರಿಯ ಕ್ಷಯರೋಗ ಲ್ಯಾಬೋರೇಟರಿ ಮೇಲ್ವಿಚಾರಕ ಶರಣಬಸಪ್ಪ ಮಂಠಾಳ , ಹೊನ್ನ ಕಿರಣಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನೀರಿಕ್ಷಾಣಧಿಕಾರಿಗಳಾದ ಶರಣಾಪ್ಪ ರಮಾಣಿ , ರೇವಣಸಿದ್ದಪ್ಪ ಕೊಡದೂರು, ಕಾರಾಗೃಹ ಸಂಸ್ಥೆಯ ಶಿಕ್ಷಕ ನಾಗರಾಜ ಮೂಲಗೆ, ಸೈಕಿಯಾಟ್ರಿಕ್ ಕೌನ್ಸಿಲರ್ ಮಹಾದೇವಿ, ಇತರೆ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಕೇಂದ್ರ ಕಾರಾಗೃಹ ಪೋಲಿಸ್ ಸಿಬ್ಬಂದಿ ಉಪಸ್ಥಿತಿಯಲ್ಲಿ ಯಶಸ್ವಿಯಾಗಿ ತಪಾಸಣೆ ನಡೆಸಿಕೊಟ್ಟರು.