ಕಾರಾಗೃಹದ ಬಂದಿಗಳಿಗೆ ತಂಬಾಕು ಸೇವನೆಯಿಂದಆಗುವ ದುಷ್ಪರಿಣಾಮದ ಕುರಿತು ಅರಿವು ಕಾರ್ಯಕ್ರಮ

ಕಲಬುರಗಿ.ಜೂ.23:ಕೇಂದ್ರ ಕಾರಾಗೃಹ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಕೇಂದ್ರ ಕಾರಾಗೃಹ ಕಲಬುರಗಿ ಇವುಗಳ ಸಹಯೋಗದೊಂದಿಗೆ ವಿಶ್ವ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ ಬುಧುವಾರ ಕಾರಾಗೃಹದ ಬಂದಿಗಳಿಗೆ ತಂಬಾಕು ಸೇವನೆಯಿಂದ ಆಗುವ ದುಷ್ಟಪರಿಣಾಮಗಳ ಅರಿವು ಮೂಡಿಸುವ ಹಾಗೂ ಹೆಚ್.ಐ.ವಿ. ಮತ್ತು ಡಿ.ಎ.ಪಿ.ಸಿ ಬಗ್ಗೆ ಅರಿವಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಕಲಬುರಗಿ ಕೇಂದ್ರ ಕಾರಾಗೃಹ ಮುಖ್ಯ ಅಧೀಕ್ಷಕರಾದ ವಿ. ಕೃಷ್ಣಮೂರ್ತಿ ಅವರು ಮಾತನಾಡುತ್ತ ತಂಬಾಕು-ಪರಿಸರಕ್ಕೆ ಮಾರಕ” ಎಂಬುವುದು ಈ ವರ್ಷದ ಘೋಷ ವಾಕ್ಯವಾಗಿದ್ದು, ಕಾರಾಗೃಹದ ಬಂದಿ ನಿವಾಸಿಗಳು ವಿವಿಧ ರೀತಿಯ ತಂಬಾಕು ಸೇವನೆ ಮಾಡುವ ಚಟಕ್ಕೆ ಬಿಳದೇ ಒಳ್ಳೆಯ ಮತ್ತು ಸದೃಡ ಆರೋಗ್ಯವನ್ನು ಹೊಂದಿ ಒಳ್ಳೆಯ ಜೀವನವನ್ನು ನಡೆಸಬೇಕೆಂದು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ವೈದ್ಯಾಧಿಕಾರಿ ಡಾ. ಬಸವರಾಜ ಕಿರಣಗಿ ಹಾಗೂ ಸುಹಾಸಿನಿ ಅವರು ತಂಬಾಕು ಸೇವೆಯಿಂದ ಆಗುವ ದುಷ್ಪರಿಣಾಮಗಳ ಹಾಗೂ ರೋಗಗಳ ಲಕ್ಷಣಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ತಂಬಾಕು ಸಾಮಾಜಿಕ ಕಾರ್ಯಕರ್ತರಾದ ಕು. ಆರತಿ, ಐ.ಆರ್.ಟಿ ಆಪ್ತ ಸಮಾಲೋಚಕಿ ಪ್ರೇಮಾ, ಐ.ಆರ್.ಟಿ ಆಪ್ತ ಸಮಾಲೋಚಕಿ ಸುಗಲಾರಾಣಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗೋಪಾಲ ಕೃಷ್ಣಕುಲಕರ್ಣಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ಪಾಲ್ಗೊಂಡಿದರು.
ಮಹಾದೇವಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಬುರಗಿ ಕೇಂದ್ರ ಕಾರಾಗೃಹದ ಶಿಕ್ಷಕ ನಾಗರಾಜ ಮುಲಗೆ ಕಾರ್ಯಕ್ರಮ ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿ ಬೀಡಿ ಮತ್ತು ತಂಬಾಕು ಸೇವಿಸುವ 130 ಕಾರಾಗೃಹದ ಬಂದಿಗಳನ್ನು ನೋಂದಣಿ ಮಾಡಿಕೊಂಡು ಅವರಿಗೆ ನಿಕೋಟಿನ್ ಗಮ್ (ಜಗಿಯುವ ಗುಳಿಗೆಗಳನ್ನು) ವಿತರಿಸಲಾಯಿತು.