ಕಾರಾಗೃಹದಲ್ಲಿ ಕೈದಿಗಳ ಮನ ಪರಿವರ್ತನಾ ಕಾರ್ಯಕ್ರಮ:ಉತ್ತಮ ಜೀವನಕ್ಕೆ ಯೋಗ-ಧ್ಯಾನ ಮದ್ದು: ಮುನಿಶ್ರೀ ಪ್ರಸಂಗಸಾಗರ ಮಹಾರಾಜರು

ಕಲಬುರಗಿ:ನ.19: ಉತ್ತಮ ಜೀವನಕ್ಕೆ ಯೋಗ ಮತ್ತು ಧ್ಯಾನ ಮದ್ದಿನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಪರಮಪೂಜ್ಯ 108 ಮುನಿಶ್ರೀ ಪ್ರಸಂಗಸಾಗರ ಮಹಾರಾಜರು ಕಿವಿಮಾತು ಹೇಳಿದರು.

ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಜೈನ ಸಮುದಾಯದ ವತಿಯಿಂದ ಹಮ್ಮಿಕೊಂಡಿದ್ದ ಜೈಲು ಬಂಧಿಗಳ ಮನ ಪರಿವರ್ತನೆಗೆ ಧ್ಯಾನ-ಯೋಗ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ನಿಮ್ಮಲ್ಲಿ ಒಳ್ಳೆಯತನವಿದ್ದರೆ, ನಿಮ್ಮಲ್ಲೇ ದೇವರು ನೆಲೆಸಿರುತ್ತಾನೆ. ಉತ್ತಮ ಜೀವನಕ್ಕೆ ಇಂತಹ ಆರೋಗ್ಯಕಾರಿ ಮನಸ್ಥಿತಿ ಬಹಳ ಮುಖ್ಯ ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ಪರಿಸ್ಥಿತಿಯ ಒತ್ತಡಕ್ಕೆ ಒಳಗಾಗಿ ಒಮ್ಮೊಮ್ಮೆ ಅಪರಾಧಗಳು ಘಟಿಸುತ್ತವೆ. ಇಂತಹ ಸಂದರ್ಭಗಳಲ್ಲಿ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಹೇಗೆ ಎಂಬುದನ್ನು ಯೋಗ ಮತ್ತು ಧ್ಯಾನ ಕಲಿಸುತ್ತದೆ ಎಂದು ಅವರು ಹೇಳಿದರು.

ಕಾರಾಗೃಹ ಅಧಿಕಾರಿಗಳು, ಸಿಬ್ಬಂದಿಗಳು, ವಿಚಾರಣಾಧೀನ ಕೈದಿಗಳು ಮತ್ತು ಕೈದಿಗಳು ಮತ್ತು ಗುರುಗಳ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.