ಕಾರಣವಿಲ್ಲದೇ ಹೊರ ಬಂದರೆ ಬೀಳುತ್ತೆ ದಂಡ

ಹರಿಹರ.ಏ. 27;  ಅನಾವಶ್ಯಕವಾಗಿ ಬೈಕ್ ಇತರೆ ವಾಹನಗಳಲ್ಲಿ ಸುಖಾಸುಮ್ಮನೆ ತಿರುಗಾಡಿದರೆ ಗಾಡಿ ಸೀಜ್ ಬೀಳುತ್ತೆ ದಂಡ ಎಚ್ಚರವಾಗಿರಿ ಜಾಗೃತರಾಗಿರಿ ಎಂದು ವೃತ್ತ ನಿರೀಕ್ಷಕ ಸತೀಶ್ ಕುಮಾರ್ ಯು ಹೇಳಿದರು. ಸಂಜೆವಾಣಿಯೊಂದಿಗೆ ಮಾತನಾಡಿದ ಅವರು ದಿನದಿನಕ್ಕೆ ವೈರಸ್ ಸೋಂಕಿತರ ಸಂಖ್ಯೆ ನಿಯಂತ್ರಣ ಗೊಳಿಸುವ ನಿಟ್ಟಿನಲ್ಲಿ  ಸಂಪುಟ ಸಭೆಯಲ್ಲಿ ಮಹತ್ತರವಾದ ನಿರ್ಧಾರವನ್ನು ತೆಗೆದುಕೊಂಡು 14ದಿನಗಳ ಕಾಲ ಸಂಪೂರ್ಣವಾಗಿ ಎಲ್ಲಾ ವ್ಯಾಪಾರ ವಹಿವಾಟ ವಾಹನಗಳ  ಸಂಚಾರವು ಬಂದ್ ಮಾಡಲು ಸರ್ಕಾರ ಆದೇಶಿಸಿದೆ ಎಂದರು.ನಾಳೆ ಬೆಳಿಗ್ಗೆ 6ಗಂಟೆಯಿಂದ ಬೆಳಿಗ್ಗೆ ಹತ್ತು ಗಂಟೆಯ ವರೆಗೂ ದಿನನಿತ್ಯ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ನೀಡಲಾಗಿದೆ .ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಯಾವುದೇ ರೀತಿಯ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ ಸರಕು ಸಾಗಾಣೆ ವಾಹನಗಳ ಸಂಚಾರಕ್ಕೆ ಯಾವುದೇ ನಿರ್ಬಂಧವಿಲ್ಲ ಬಸ್ ಸಂಚಾರ ಖಾಸಗಿ ವಾಹನಗಳ ಆಟೋ ಕ್ಯಾಬ್ ಗಳು ಸಂಚಾರಕ್ಕೆ ಅವಕಾಶ ಇಲ್ಲ ಬಾರ್ ಹೋಟಲ್ ಗಳು ಪಾರ್ಸಲ್ ಪಡೆಯಲು ಅವಕಾಶವಿದೆ .ಕೃಷಿ ಚಟುವಟಿಕೆಯಲ್ಲಿ ತೊಡಗುವವರಿಗೆ ವಿನಾಯಿತಿ ನೀಡಲಾಗಿದೆ .ಕೋವಿಡ್ ಮಾರ್ಗ ಸೂಚನೆಗಳ ಅನ್ವಯ ಆದೇಶದಂತೆ ಪಾಲನೆ ಮಾಡಬೇಕು .ಸುಖಾಸುಮ್ಮನೆ ಹೊರಗೆ ಓಡಾಡುವರು ವಾಹನಗಳಲ್ಲಿ ಸಂಚರಿಸುವವರು ಕಂಡುಬಂದಲ್ಲಿ ಕೂಡಲೇ ಅವರ ಬೈಕ್ ವಾಹನಗಳನ್ನು ಸೀಜ್ ಮಾಡಿ ದಂಡವನ್ನು ಕಟ್ಟಬೇಕಾಗುತ್ತದೆ ಎಂದರು. ಸುನಾಮಿಯಂತೆ ಅಬ್ಬರಿಸುತ್ತಿರುವ ಮಹಾಮಾರಿ ಸೊಂಕನ್ನು ನಿಯಂತ್ರಣಗೊಳಿಸುವುದಕ್ಕೆ ನಗರ ಮತ್ತು ಗ್ರಾಮೀಣ ಪ್ರದೇಶದ ನಾಗರಿಕರು ಸರ್ಕಾರದ  ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸ ದಿದ್ದಲ್ಲಿ ಕಾನೂನು ರೀತಿ ಕಠಿಣ ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ .ಸೋಂಕು ನಿಯಂತ್ರಣಕ್ಕೆ ಆರೋಗ್ಯ ನಗರಸಭೆ ಕಂದಾಯ ಪೋಲಿಸ್ ಇತರ ಇಲಾಖೆಗಳು ಮತ್ತು ವೈದ್ಯರುಗಳು ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದರೆ ಸಾಲದು ಪ್ರತಿಯೊಬ್ಬರೂ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿ ಇಲಾಖೆಗಳೊಂದಿಗೆ ಕೈಜೋಡಿಸಿದಾಗ ಮಾತ್ರ ಡೆಡ್ಲಿ ವೈರಸ್ ಅನ್ನು ನಿಯಂತ್ರಣ ತರುವುದಕ್ಕೆ ಸಾಧ್ಯ ನಿಮಗೆ ಕೈ ಮುಗಿದು ಕೇಳುತ್ತೇವೆ 14ದಿನಗಳ ಕಾಲ ನಿಮ್ಮ ಕೆಲಸ ಕಾರ್ಯಗಳು ಇತರ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಮನೆಯಲ್ಲೇ ಇರಿ ಮಾಸ್ಕ್ ಹಾಕಿಕೊಳ್ಳಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ ಜೀವ ಇದ್ದರೆ ಮಾತ್ರ ಜೀವನ ನಡೆಸುವುದಕ್ಕೆ ಸಾಧ್ಯವಾಗುತ್ತದೆ ಜೀವಾನೇ ಇಲ್ಲ ಅಂದರೆ ಏನು ಮಾಡುತ್ತೀರಾ ಆದ್ದರಿಂದ ಜನರ ಜೀವನ ಮತ್ತು ಜೀವದ ಜತೆ ಚೆಲ್ಲಾಟವಾಡುತ್ತಿರುವ ವೈರಸ್ ಸೋಂಕನ್ನು ನಿಯಂತ್ರಣ ಮಾಡಿ ಮುಕ್ತಗೊಳಿಸುವುದಕ್ಕೆ ಇಲಾಖೆಗಳೊಂದಿಗೆ ಕೈಜೋಡಿಸಬೇಕು ಎಂದು ಹೇಳಿದರು