ಕಾರಟಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆದ ಶಸ್ತ್ರಚಿಕಿತ್ಸೆ

ಸಂಜೆವಾಣಿ ವಾರ್ತೆ

ಹುಬ್ಬಳ್ಳಿ. ಜು.30; ನಗರದ ನೇತಾಜಿ ಕಾಲೋನಿಯಲ್ಲಿರುವ ಕಾರಟಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ.ಓವೇರಿಯನ್ ಟ್ಯೂಮರ್ ನಿಂದ ಬಳಲುತ್ತಿದ್ದ ಮಹಿಳೆ ಇದೀಗ ಆರೋಗ್ಯವಾಗಿದ್ದಾರೆ ಎಂದು ಡಾ.ರಾಮಚಂದ್ರ ಕಾರಟಗಿಯವರು ತಿಳಿಸಿದ್ದಾರೆ.ಮೂಲತಃ ಬೆಳಗಾವಿಯವರಾದ ಮಹಿಳೆ ಹೊಟ್ಟೆನೋವಿನಿಂದ ತೀವ್ರ ಅನಾರೋಗ್ಯ ಹೊಂದಿದ ಮಹಿಳೆ ಕಾರಟಗಿ  ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ತಪಾಸಣೆಗೆ ಆಗಮಿಸಿದ್ದ ವೇಳೆ ಮಹಿಳೆಯ ಸ್ಕ್ಯಾನಿಂಗ್ ಮಾಡಿದಾಗ ಹೊಟ್ಟೆಯಲ್ಲಿ ಸುಮಾರು 7 ಕೆಜಿ ಗಾತ್ರದ ಗಡ್ಡೆಯಿರುವುದು ಕಂಡುಬಂದಿತು ಹಾಗೂ ಅಪೆಂಡಿಸೈಟಿಸ್ ಇತ್ತು ಇದಲ್ಲದೆ ಗರ್ಭಕೋಶದಲ್ಲಿ ತೊಂದರೆ ಸಹ ಉಂಟಾಗಿತ್ತು ಸುಮಾರು 45 ವರ್ಷದ ಮಹಿಳೆಯ ಶಸ್ತ್ರಚಿಕಿತ್ಸೆ ಸವಾಲೆನಿಸಿತ್ತು.ನಮ್ಮ ಆಸ್ಪತ್ರೆಯ ನುರಿತ ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ  ಎಂದರು.ರಾಮಚಂದ್ರ ಕಾರಟಗಿ ನೇತೃತ್ವದಲ್ಲಿ ನಡೆದ ಶಸ್ತ್ರ ಚಿಕಿತ್ಸೆಯನ್ನು ಡಾ.ಕೋರಿ ನೆರವೇರಿಸಿದ್ದಾರೆ.ಈ ವೇಳೆ ಅರವಳಿಕೆ ತಜ್ಞರಾದ ಡಾ.ಪವಿತ್ರ ದಂಡಿನ್,ಮ್ಯಾನೇಜರ್ ದಿನೇಶ್ ಜೈನ್,ಸಿಬ್ಬಂದಿಗಳಾದ ಜುಬೇರ್,ಮಾಯಾ,ನಂದಾ ಉಪಸ್ಥಿತರಿದ್ದರು.