ಕಾರಟಗಿ ಪೊಲೀಸ್ ಪಥ ಸಂಚಲನ

ಕಾರಟಗಿ:ಡಿ:25:ಗ್ರಾಮ ಪಂಚಾಯತ್ ಚುನಾವಣೆ ನಿಮಿತ್ಯ ಚುನಾವಣೆ ಶಾಂತಿಯುತವಾಗಿ ನಡೆಸಲು ಪೊಲೀಸ್ ಹೈ ಅಲರ್ಟ್ ಆಗಿದ್ದು ಇಂದು ವಿವಿಧ ಗ್ರಾಮಗಳಲ್ಲಿ ಪೊಲೀಸ್ ರು ಪಥ ಸಂಚಲನ ಮಾಡಿ ಜಾಗೃತಿ ಮೂಡಿಸಿದರು,ಕಾರಟಗಿ ಠಾಣೆಯ ಪಿಎಸ್ಐ ಕೆ.ಮಲ್ಲಪ್ಪ ಇವರ ನೇತೃತ್ವದಲ್ಲಿ ಪೊಲೀಸ್ ರು ಪಥ ಸಂಚಲನ ಮಾಡಿದರು.
ಸಮೀಪದ ಬೂದಗುಂಪ, ಹಾಲಸಮುದ್ರ.ತಿಮ್ಮಾಪುರ ತ್ರಿವಳಿ ಗ್ರಾಮಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದರು,
ಸಶಸ್ತ್ರ ಮೀಸಲುಪಡೆ ಸೇರಿ 100 ಕ್ಕೂಹೆಚ್ಚು ಪೊಲೀಸ್ ರು ಪಥ ಸಂಚಲನ ಮಾಡಿ ಚುನಾವಣೆ ಭದ್ರತೆಯ ಬಗ್ಗೆ ಜಾಗೃತಿ ಮೂಡಿಸಿದರು, ಡಿ.27 ಕ್ಕೆ ಗ್ರಾಮ ಪಂಚಾಯತ್ ಚುನಾವಣೆ ನಡೆಯಲಿದ್ದು, ಪೊಲೀಸ್ ಇಲಾಖೆ ಕಾರಟಗಿ ತಾಲೂಕಿನಾದ್ಯಂತ ಎಲ್ಲಾ ಗ್ರಾಮಗಳಲ್ಲಿ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ,