ಕಾರಟಗಿ ಪುರಸಭೆ ಬಿಜೆಪಿಗೆ ವಶ , ಫಲಿಸದ ಕೈ ತಂತ್ರ

ಕಾರಟಗಿ:ನ:06:ಪಟ್ಟಣದ ಪುರಸಭೆ ಅಧ್ಯಕ್ಷರಾಗಿ ಮಾಜಿ ಸಚಿವ ಸಾಲೋಣಿ ನಾಗಪ್ಪನವರ ಪುತ್ರ ಶರಣೇಶ ಸಾಲೋಣಿ ಅವಿರೋಧವಾಗಿ ಅಯ್ಕೆಯಾದರು.ಕಾರಟಗಿ ನೂತನ ತಾಲೂಕು ಘೋಷಣೆ ಅಗಿದ್ದರಿoದ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಹಿಂದೇಟು ಹಾಕಿದ್ದ ಶರಣೇಶರವರು. ಮುಂದಿನ ತಾಲೂಕು ಪಂಚಾಯತಿ ಅಥವಾ ಜಿಲ್ಲಾ ಪಂಚಾಯತಿ ಸ್ಥಾನಕ್ಕೆ ಪೈಪೋಟಿ ನೀಡಲು ಸಿದ್ದರಿದ್ದರು ಏನ್ನಲಾಗಿತ್ತು. ಅದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಒಲ್ಲದ ಮನಸ್ಸಿನಿಂದ ಪುರಸಭೆ ಅಧ್ಯಕ್ಷರಾಗಿ ಅಯ್ಕೆಯಾಗಿದ್ದರೆ ಎಂದು ಹೇಳಲಾಗುತ್ತಿದೆ.ಕಾಂಗ್ರೇಸ್ ನಿಂದ ರವಿ ನಂದಿಹಳ್ಳಿ ನಾಮಪತ್ರ ಸಲ್ಲಿಸಿದ್ದರು. ನಂತರ ನಾಮ ಪತ್ರ ಹಿಂಪಡೆದಿದ್ದರಿಂದ ಬಿಜೆಪಿ ಬೆಂಬಲಿತ ಶರಣೇಶ ಸಾಲೋಣಿ ಅವಿರೋಧವಾಗಿ ಅಯ್ಕೆ ಮಾಡಲಾಯಿತು. ತಹಶಿಲ್ದಾರರು ಶಿವಶಂಕರಪ್ಪ ಅಯ್ಕೆ ಘೋಷಿಸಿದರು. ನಂತರ ಕಾರ್ಯಕರ್ತರು ವಿಜಯೋತ್ಸವ ಅಚರಿಸಿದರು.
ಸಂಸದ ಸಂಗಣ್ಣ ಕರಡಿ.ಶಾಸಕ ಬಸವರಾಜ ದಡೇಸೂಗುರು.ಮಂಡಳ ಅಧ್ಯಕ್ಷ ಚಂದ್ರಶೇಖರ್ ಮುಸಾಲಿ.ಎಪಿಎಂಸಿ ಅಧ್ಯಕ್ಷ ಸೋಮಶೇಖರ ಮುಸ್ಟೂರು.ನಾಗರಾಜ ಅರಳಿ.ಮುಖಂಡರಾದ ನಾಗರಾಜ ಬಿಲ್ಗಾರ್. ವಿರೇಶ ಸಾಲೋಣಿ. ಗಿರಿಯಪ್ಪ ಬೂದಿ. ಶಿವಶರಣೇಗೌಡ ಯರಡೋಣ. ಪುರಸಭೆ ಸದಸ್ಯರಾದ ಸಂಗನಗೌಡ. ಹೊಳಿಯಪ್ಪ ದೇವರಮನಿ.ಯೂಸುಫ್ ಇನ್ನಿತರರು ಇದ್ದರು.