ಕಾರಟಗಿ ಪುರಸಭೆ ಕಾರ್ಯಲಯದ ಅದ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ 05 ರಂದು ಸಭೆ

ಕಾರಟಗಿ:29:ಪಟ್ಟಣದ ಪುರಸಭೆ ಕಾರ್ಯಲಯದ ಅದ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಿಯಮನುಸಾರವಾಗಿ ನವೆಂಬರ್ 05 ರಂದು ಸಭೆ ಕರೆಯಲಾಗಿದೆ.
ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಸ್ಪರ್ಧೆಗೆ ಇಚ್ಚಿಸುವರು. ಅನುಮೋದಕರು ನಾಮ ನಿರ್ದೇಶನ ಪತ್ರವನ್ನು ನಿಗದಿತ ನಮೂನೆಯಲ್ಲಿ 5-11-2020 ರಂದು ಮಧ್ಯಾನ 1 ಗಂಟೆಯಿಂದ 3 ಗಂಟೆ ಒಳಗೆ ಪುರಸಭೆ ಕಾರ್ಯಲಯದಲ್ಲಿ ಚುಣಾವಣೆ ಅಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ.
ಸಾಮಾನ್ಯ ಸ್ಥಾನಕ್ಕೆ ಅಯ್ಕೆಯಾಗಿ ಬಂದಿರುವ ಸದಸ್ಯರು ನಿಗದಿಪಡಿಸಿದ ಮೀಸಾಲಾತಿ ಸ್ಥಾನಕ್ಕೆ ನಾಮಪತ್ರವನ್ನು ತಹಶೀಲ್ದಾರರಿಂದ ಪಡೆದ ಜಾತಿ ಅಧಾಯ ಪ್ರಮಾಣ ಪತ್ರವನ್ನು ನಾಮಪತ್ರಕ್ಕೆ ಲಗತ್ತಿಸಬೇಕು.ನಾಮ ಪತ್ರವನ್ನು ನವೆಂಬರ್ 11 ರ ಮದ್ಯಾಹ್ನದೊಳೆಗೆ ಹಿಂಪಡೆಯಬಹುದಾಗಿದೆ. ಚುಣಾವಣೆ ಕೈ ಎತ್ತುವ ಮೂಲಕ ಮತದಾನ ನಡೆಸಲಾಗುವುದು. ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಉಪಾದ್ಯಕ್ಷ ಸ್ಥಾನಕ್ಕೆ ಎಸ್ಟಿ ಮೀಸಲಾಗಿದೆ ಎಂದು ಪತ್ರಿಕೆ ಪ್ರಕಟನೆಯಲ್ಲಿ ತಹಸೀಲ್ದಾರ ಶಿವಶಂಕರಪ್ಪ ಕೊಟ್ಟಳ್ಳಿ ತಿಳಿಸಿದ್ದಾರೆ.