ಕಾರಟಗಿ: ಪಿಎಸ್ಐ ಎಲ್ ಬಿ ಅಗ್ನಿಅಧಿಕಾರ ಸ್ವೀಕಾರ

ಕಾರಟಗಿ:ಜ:07: ಕಾರಟಗಿ ಪೊಲೀಸ್ ಠಾಣೆಗೆ ನೂತನ ಪಿಎಸ್ಐ ಎಲ್ ಬಿ ಅಗ್ನಿ ರವರು ಇಂದು ಅಧಿಕಾರ ಸ್ವೀಕರಿಸಿದರು, ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು ಕಾರಟಗಿ ಸುತ್ತಮುತ್ತಲಿನ ಅಕ್ರಮ ತಡೆಯಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು, ಅಪರಾಧ ವಿಭಾಗದ ಪಿಎಸ್ಐ ಕೆ. ಮಲ್ಲಪ್ಪ ಅಧಿಕಾರ ಹಸ್ತಾಂತರಿಸಿದರು, ಈ ಇಂದೆ ಅಧಿಕಾರದಲ್ಲಿದ್ದ ಪಿಎಸ್ಐ ಅವಿನಾಶ್ ಕಾಂಬ್ಳೆ ಕೆಲ ಆರೋಪ ಹೊತ್ತು ವರ್ಗಾವಣೆ ಆಗಿದ್ದರು. ಠಾಣೆಗೆ ಬಂದಂತ ಪಿಎಸ್ಐ ಗಳು ಒಂದಲ್ಲ ಒಂದು ಕಾರಣಕ್ಕೆ ವರ್ಗಾವಣೆಯಾಗುತ್ತಿದ್ದು, ಎಲ್ ಬಿ ಅಗ್ನಿಯ ಪ್ರವೇಶದಿಂದಾಗಿ ಠಾಣೆಯಲ್ಲಿ ಹೆಚ್ಚು ದಿನ ಕಾರ್ಯನಿರ್ವಾಹಿಸುತ್ತಾರ ಎನ್ನುವದು ಕಾರಟಗಿ ಜನತೆಯ ಯಕ್ಷ ಪ್ರಶ್ನೆಯಾಗಿದೆ,