ಕಾರಟಗಿ ಪಟ್ಟಣ ಸ್ತಬ್ದ

ಕಾರಟಗಿ:ಏ:25: ಸರಕಾರದ ಆದೇಶನ್ವಯದ ನಿಮಿತ್ಯ ಪಟ್ಟಣದಲ್ಲಿ ಭಾನುವಾರದಂದು ಲಾಕ್ ಡೌನ್ ಮಾಡಲಾಯಿತು,
ಗಂಗಾವತಿ ರಾಯಚೂರು ಹೆದ್ದಾರಿಯ ನವಲಿ ರಸ್ತೆ ಬೂದಗುಂಪ ರಸ್ತೆಯ ಎಲ್ಲಾ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಮಾಡಿದ್ದರಿಂದ ರಸ್ತೆಗಳಲ್ಲಾ ಬಿಕೋ ಎನ್ನುತ್ತಿದ್ದವು,
ಹಳೆ ಬಸ್ ನಿಲ್ದಾಣದ ಬಳಿ ಅಂಗಡಿ ತರೆದು ವ್ಯಾಪಾರ ನಡೆಸುತ್ತಿದ್ದ ಅಂಗಡಿ ಮಾಲೀಕನಿಗೆ ಪುರಸಭೆ ಮುಖ್ಯಾಧಿಕಾರಿಗಳು ದಂಡ ವಿಧಿಸಿ ಅಂಗಡಿ ಬಂದ್ ಮಾಡಿಸಿದರು,
ನಗರದಲ್ಲಿ ಕೊರೋನ ಬಗ್ಗೆ ಜಾಗೃತಿ ಮೂಡಿಸಿತ್ತಿದ್ದರು ಸಹ ಕೆಲ ಅಂಗಡಿಗಳು ಕದ್ದು ಮುಚ್ಚಿ ವ್ಯಾಪಾರ ಮಾಡಿದ್ದು ಅಲ್ಲಲ್ಲಿ ಕಂಡು ಬಂತು,
ನವಲಿ ವೃತ್ತದ ಬಳಿ ಮಾಸ್ಕ್ ಧರಿಸದ ಬೈಕ್ ಸವಾರರಿಗೆ ಪೊಲೀಸರು ದಂಡ ವಿಧಿಸಿದರು. ಇದೆ ಸಂದರ್ಭದಲ್ಲಿ ಬೈಕ್ ಸವಾರರಿಗೆ ಪಿಎಸ್ಐ ಎಲ್ ಬಿ ಅಗ್ನಿ ಕಪಾಳ ಮೋಕ್ಷ ಮಾಡಿದ್ದು ಕಂಡು ಬಂತು,
ಪುರಸಭೆ ಮುಖ್ಯಾಧೀಕಾರಿ ರಡ್ಡಿ ರಾಯನಗೌಡ. ಅಧ್ಯಕ್ಷ ಶರಣೇಶ್ ಸಾಲೋಣಿ. ಅರೋಗ್ಯ ಇಲಾಖೆ ಸಿಬ್ಬಂದಿ. ಪೊಲೀಸ್ ಸಿಬ್ಬಂದಿ ಪುರಸಭೆ ಸಿಬ್ಬಂದಿಗಳು ಹಾಜರಿದ್ದರು.