
ಸಂಜೆವಾಣಿ ವಾರ್ತೆ
ಕಾರಟಗಿ: ಮೇ :04: ಕೇಂದ್ರ ಚುನಾವಣಾ ಆಯೋಗದಿಂದ ಕುಷ್ಟಗಿ ಹಾಗೂ ಕನಕಗಿರಿ ಮತಕ್ಷೇತ್ರಕ್ಕೆ ವೀಕ್ಷಕರಾಗಿ(Observer) ಆಗಮಿಸಿದ ಶ್ರೀ ಸ್ವಪ್ನಿಲ್ ನಾಯಕ್ IAS ಇವರು ಕನಕಗಿರಿ ಮತಕ್ಷೇತ್ರದ ಕಾರಟಗಿ ಭಾಗದ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು,
ನಗರದ ಪುರಸಭೆ ಕಾರ್ಯಾಲಯ, ಕರ್ನಾಟಕ ಪಬ್ಲಿಕ್ ಸ್ಕೂಲ್. ಮರ್ಲನಹಳ್ಳಿ ಗ್ರಾ.ಪಂ. ಸಿದ್ದಾಪುರ ಗ್ರಾ.ಪಂ. ಮತ್ತು ಜಂಗಮರ ಕಲ್ಗುಡಿ ಭಾಗದ ಮತಗಟ್ಟೆಗಳಿಗೆ ಭೇಟಿ ನೀಡಿ ಸೂಕ್ಷ್ಮ ಅತಿ ಸೂಕ್ಷ್ಮ ಮತಗಟ್ಟೆ (Polling stations) ಹಾಗೂ ಚೆನ್ನಹಳ್ಳಿ ಚೆಕ್ ಪೋಸ್ಟ್ ಭೇಟಿ ನೀಡಿ ಪರಿಶೀಲಿಸಿದರು,
ಈ ಸಂದರ್ಭದಲ್ಲಿ ತಹಸೀಲ್ದಾರ್ ಬಸವರಾಜ್. ಪುರಸಭೆ ಮುಖ್ಯಾಧಿಕಾರಿ ರೆಡ್ಡಿ ರಾಯನ ಗೌಡ. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಧಿಕಾರಿ ನರಸಪ್ಪ ಏನ್. ಅಂಬೇಡ್ಕರ್ ನಿಗಮದ ಜಿಲ್ಲಾ ವ್ಯವಸ್ಥಾಪಕರು ಮತ್ತು ಸಂಪರ್ಕ ಅಧಿಕಾರಿ ವೈ ಕಾಳೆ ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು,