ಕಾರಟಗಿ ಆಸ್ಪತ್ರೆಯಲ್ಲಿ ನರ್ಸಿಂಗ್ ಡೇ- ಮದರ್ಸ್ ಡೇ ಆಚರಣೆ

ಹುಬ್ಬಳ್ಳಿ. ಮೇ.೧೩; ಹುಬ್ಬಳ್ಳಿಯ‌ ವಿಜಯಲಕ್ಷ್ಮಿ ಫೌಂಡೇಶನ್ ಹಾಗೂ ಕಾರಟಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವತಿಯಿಂದ ಹಾಗೂ ಡೈನಾಮಿಕ್ ಟೆಕ್ನೋ ಸಹಯೋಗದಲ್ಲಿ ಆಸ್ಪತ್ರೆಯ ಸಭಾಂಗಣದಲ್ಲಿ ನರ್ಸಿಂಗ್ ಡೇ ಹಾಗೂ‌ ತಾಯಂದಿರ ದಿನಾಚರಣೆಯನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಾರಟಗಿ ಆಸ್ಪತ್ರೆಯ ಸಂಸ್ಥಾಪಕ‌ರಾದ ಡಾ.ರಾಮಚಂದ್ರ ಕಾರಟಗಿ,ಕಿಮ್ಸ್ ಆಸ್ಪತ್ರೆಯ ಪ್ರೊಫೆಸರ್ ಡಾ.ವೀಣಾ ಕಾರಟಗಿ,ಡೈನಾಮಿಕ್ ಟೆಕ್ನೋದ ಬಸವರಾಜ್,ಕಾರಟಗಿ ಆಸ್ಪತ್ರೆಯ ಆಡಳಿತಾಧಿಕಾರಿ ದಿನೇಶ್ ಜೈನ್, ಜುಬೇರ್ ಹಾಗೂ ಆಸ್ಪತ್ರೆಯ ಶುಶ್ರೂಷಕರುಗಳು ಉಪಸ್ಥಿತರಿದ್ದರು.