ಕಾರಜೋಳ ಪತ್ರಿಕಾಗೋಷ್ಠಿ: ಮಾದಿಗ ನಾಯಕರಿಂದ ಖಂಡನೆ

ಸಂಜೆವಾಣಿ ವಾರ್ತೆ
ಮಾನ್ವಿ.ಡಿ.೨೧- ಚಿತ್ರದುರ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಲು ಮಾಜಿ ಉಪ ಮುಖ್ಯಮಂತ್ರಿ ಗೋವಿದ ಕಾರಜೋಳ ಅವರಿಗೆ ಅಡ್ಡಿ ಪಡಿಸಿದ ಕೈ ಕಾರ್ಯಕರ್ತರ ಗಲಾಟೆಯನ್ನು ಮಾದಿಗ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ.
ಕೈ ಕಾರ್ಯಕರ್ತರ ವಿರುದ್ಧ ಸೂಕ್ರ ಕಾನೂನು ಕೈಗೊಳ್ಳಬೇಕು ಮತ್ತೊಮ್ಮ ಘಟನೆಗಳು ಮರು ಕಳಿಸದಂತೆ ಎಚ್ಚರಿಕೆ ವಹಿಸಬೇಕೆಮದು ಮಾದಿಗ ಸಮುದಾಯ ಮುಖಂಡರಾದ ಲಕ್ಷ್ಮಣ ಸಿಪಿ ಮಠ, ಮತ್ತಣ್ಣ ಸೀಕಲ್, ಮುತ್ತಣ್ಣ ಚಾಗಭಾವಿ ಒತ್ತಾಯಿಸಿದ್ದಾರೆ.
ಮಾದಿಗ ಸಮುದಾಯದ ಪ್ರಥಮ ಉಪಮುಖ್ಯಮಂತ್ರಿಯಾಗಿ ಅಡಳಿತ ನಡೆಸಿರುವ ಗೋವಿಂದ ಕಾರಜೋಳ ಬಿಜೆಪಿಯಲ್ಲಿ ಪ್ರಬಲ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.
ಸದಾಶಿವ ಆಯೋಗ ಜಾರಿಗಾಗಿಪತ್ರಿಕಾಗೋಷ್ಠಿಯಲ್ಲಿ ಮಾತನಾಡಲು ಬಂದಿದ್ದ ವೇಳೆ ಕೆಲ ಕಾಂಗ್ರೆಸ್ ಕಾರ್ಯಕರ್ತರು ಪತ್ರಿಕಾ ಭವನಕ್ಕೆ ನುಗ್ಗಿ ಗಲಾಟೆ ಮಾಡಿರುವುದು ತೀವ್ರ ಖಮಡನೀಯ ಮಾದಿಗ ಕಾರ್ಯಕರ್ತರನ್ನು ಬಳಸಿಕೊಳ್ಳುವ ಮೂಲಕ ಮಾದಿಗ ಸಮಾಜಕ್ಕೆ ಅನ್ಯಾಯವನ್ನು ಮುಚ್ಚಿ ಹಾಕಲು ನಡೆದಿರುವ ಪ್ರಯತ್ನ ಎಂದು ಆರೋಪಿಸಿದ್ದಾರೆ.