ಕಾರಂಜಾ ಸಂತ್ರಸ್ಥರಿಗೆ ವೈಜ್ಞಾನಿಕ ಪರಿಹಾರದರೂಪದಲ್ಲಿ ವಿಶೇಷ ಪ್ಯಾಕೆಜ್ ಘೋಷಿಸಬೇಕು:ಈಶ್ವರ ಬಿ.ಖಂಡ್ರೆ

ಬೀದರ:ಜು.17:ಕಾರಂಜಾ ಮುಳುಗಡೆ ಸಂತ್ರಸ್ಥರೈತರು ನಡೆಸುತ್ತಿರುª Àಅಹೋರಾತ್ರಿ ಧರಣಿಯು 16ನೇ ದಿವಸಕ್ಕೆ ಕಾಲಿರಿಸಿದೆ. ಕೆ.ಪಿ.ಸಿ.ಸಿ. ಕಾರ್ಯಧ್ಯಕ್ಷ, ಮಾಜಿ ಸಚಿವರ ಹಾಗೂ ಭಾಲ್ಕಿ ಶಾಸಕರಾದ ಶ್ರೀ.ಈಶ್ವರ ಬಿ.ಖಂಡ್ರೆಯವರುಧರಣಿ ನಿರತ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ಥರಜೊತೆ ಕೂಲಂಕುಶವಾಗಿ ಚರ್ಚಿಸಿದರು.

ಜಿಲ್ಲೆಯ ಹಿರಿಯ ನಾಯಕ ಭೀಮಣ್ಣಖಂಡ್ರೆ, ಹಾಗೂ ನಾನು ಸಚಿವನಿದ್ದಾಗ ಕಾರಂಜಾ ಸಂತ್ರಸ್ಥರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿತಜ್ಞರ ಸಮಿತಿಯನ್ನು ರಚಿಸಿ ಬೇಗನೆ ವೈಜ್ಞಾನಿಕ ಪರಿಹಾರ ನೀಡುವಕುರಿತು ಶಿಫಾರಸ್ಸು ಮಾಡಬೇಕೆಂದು ನಿರ್ದೇಶನೆ ನೀಡಲಾಗಿತ್ತು.ಆದರೆ ಸರ್ಕಾರ ಬದಲಾಯಿಸಿದ ನಂತರ ವಿಷಯವನ್ನುಗಂಭೀರವಾಗಿ ಪರಿಗಣಿಸಲೆಇಲ್ಲ. ಆ ನಂತರ ಸಮಿಶ್ರ ಸರ್ಕಾರದ ಸಮಯದಲ್ಲಿ ಅಂದಿನ ಮುಖ್ಯಮಂತ್ರಿಗಳು ಸರ್ಕಾರದ ಮಟ್ಟದಲ್ಲಿ ಸಭೆಯನ್ನು ನಡೆಸಿ ಸಂತ್ರಸ್ಥರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನವನ್ನು ಮಾಡಿದ್ದರು, ಆದಾಗಿಯು ಸರ್ಕಾರದ ಬದಲಾವಣೆಆದುದ್ದರಿಂದ ವಿಷಯು ನೆನೆಗುದಿಗೆ ಬಿದ್ದಿದೆ.

ಮಳೆ – ಗಾಳಿ ಎನ್ನದೆ, ಕಾರಂಜಾ ಸಂತ್ರಸ್ಥರೈತರು ಬೀದರಜಿಲ್ಲಾಉಸ್ತುವಾರಿ ಸಚಿವರಕಛೇರಿಯ ಸಮ್ಮ್ಮುಖದಲ್ಲಿ ಕಳೆದ 16 ದಿವಸಗಳಿಂದ ಅಹೋರಾತ್ರಿಧರಣಿ ನಡೆಸುತ್ತಿದ್ದರು.ಆಡಳಿತ ಪಕ್ಷದಚುನಾಯಿತ ಪ್ರತಿನಿಧಿಗಳು ಇವರ ಸಮಸ್ಯೆ ಆಲಿಸಲು ಬಾರದೆಇರುವುದು, ಖಂಡನೀಯವಾಗಿದೆ.ಈಗಲಾದರು ಸರ್ಕಾರವುಎಚ್ಚೆತುಕೊಂಡುಕಾರಂಜಾ ಸಂತ್ರಸ್ಥರೈತರಿಗೆ ವಿಶೇಷ ಪ್ಯಾಕೆಜ್ ನೀಡುವ ಮೂಲಕ ವೈಜ್ಞಾನಿಕ ಪರಿಹಾರ ಮಂಜೂರು ಮಾಡುವ ನಿಟ್ಟಿನಲ್ಲಿ ಶಿಘ್ರದಲ್ಲಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಮಾಜಿ ಶಾಸಕ ಅಶೋಕ ಖೇಣಿ, ಜಿಲ್ಲಾಕಾಂಗ್ರೇಸ್‍ಅಧ್ಯಕ್ಷ ಶ್ರೀ. ಬಸವರಾಜಜಾಬಶೇಟ್ಟಿ, ಮೀನಾಕ್ಷಿ ಸಂಗ್ರಾಮ, ಚಂದ್ರಶೇಖರಚನ್ನಶೇಟ್ಟಿ, ಯುವ ನಾಯಕ ಚಂದ್ರಾಸಿಂಗ್, ರೈತ ಸಂಘದಅಧ್ಯಕ್ಷಆಣದೂರೆ, ದಯಾನಂದ ಸ್ವಾಮಿ, ಶಾಮಣ್ಣ ಬೊಮ್ಮಳಗಿ, ಶಿವರಾಜ ಕಟಗಿ, ದೇವಿದಾಸಚಿಮಕೋಡ, ನಸಿಮ್ ಪಟೇಲ್, ಮನ್ನನ ಪಟೇಲ್, ಭಾಗವಹಿಸಿದರು,

ಹಿತರಕ್ಷಣ ಸಮಿತಿಯಅಧ್ಯಕ್ಷರಾದಚಂದ್ರಶೇಖರ ಪಾಟೀಲ್ ಹೊಚಕನಳ್ಳಿ, ಪ್ರಧಾನ ಕಾರ್ಯದಶಿ ಶ್ರೀ.ನಾಗಶೇಟ್ಟೆಪ್ಪಾ ಹಚ್ಚಿ, ನಿರ್ದೇಶಕರು ಶ್ರೀ.ವೀರಭದ್ರಪ್ಪಾಉಪ್ಪಿನ ನವರು ಮಾತನಾಡಿದರು.

ವಿವಿಧ ಹಳ್ಳಿಗಳ ಸರಿ ಸುಮಾರು 400 – 500 ಜನರೈತರು ಭಾಗವಹಿಸಿದರು, ನಾಗಶೇಟ್ಟಿ, ಪ್ರೇಮದಾಸ, ಫರಿದ ಸಾಬ್, ವಿಜಯಕುಮಾರ, ರಾಜಶೇಕರ್, ಮಡಿವಾಳಪ್ಪಾ, ಅಣ್ಣೆಪ್ಪಾ, ಸುಧಾಕರ ಪಾಟೀಲ್, ಗುಡುಸಾಬ್, ಸೂರ್ಯಕಾಂತ, ಮಾದಪ್ಪಾ, ಲಕ್ಷ್ಮಿಬಾಯಿ, ಬಸವರಾಜ, ಮೋಹನರಾವ, ಹಣಮಂತ, ರಘುನಾಥ, ಮಲ್ಲಿಕಾರ್ಜುನಗುತ್ತಿ, ಸಂಗಮ್ಮ ಮಾಣಿಕ, ಬಸವರಾಜ, ಮಹೇಶ, ರಾಜಪ್ಪಾ, ಪ್ರಭು, ರಾಜಕುಮಾರ, ರಜಿಯೋದ್ದಿನ್, ಬಸವರಾಜ, ಚಂದ್ರಶೇಖರ್, ಶಂಕ್ರೇಪ್ಪಾ ಬಸಮ್ಮಾ, ಈರಮ್ಮಾ, ಪಾರವತಿ, ಸುನೀತಾ, ಲಾಲಬೀ, ಶಶಿರ ಅಲಿ, ಕಸ್ತೂರಬಾಯಿ, ಭವರಾತ್ರಿ, ಲಲೀತಾ, ಇಂದುಮತಿ, ಸಂಗ್ಗಾರೆಡ್ಡಿ, ಚಂದ್ರಕಾಂತ, ಸಿದ್ಧಲಿಂಗ, ಓಂಕಾರ, ವಿಶ್ವನಾಥ, ಮುಂತಾದವರು ಸೇರಿದಂತೆ ಅನೇಕ ಸಂತ್ರಸ್ಥರೈತರು ಹಾಜರಿದ್ದರು.