ಕಾರಂಜಾ ಜಲಾಶಯ ಶೇ.88.8ರಷ್ಟು ಭರ್ತಿ, 6560 ಕ್ಯೂಸೆಕ್ ಹೊರ ಹರಿವು

ಬೀದರ್:ಜು.28: ಜಿಲ್ಲೆಯಲ್ಲಿ ಸತತ ಮಳೆಯಿಂದಾಗಿ ಹಾಗೂ ತೆಲಂಗಾಣದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಕಾರಣದಿಂದ ಕಾರಂಜಾ ಜಲಾಶಯಕ್ಕೆ ಸಾಕಷ್ಟು ನೀರು ಹರಿದು ಬರುತ್ತಿದೆ. ಸದ್ಯ ಜಲಾಶಯ ಶೇ. 88.2 ರಷ್ಟು ಪ್ರಮಾಣ ಭರ್ತಿಯಾಗಿದೆ.

7.691 ಟಿಎಂಸಿ ಸಾಮಥ್ರ್ಯದ ಜಲಾಶಯ ಇದಾಗಿದ್ದು, ಜಲಾಶಯದಲ್ಲಿ ಈಗ 6.605 ಟಿಎಂಸಿ ನೀರು ಸಂಗ್ರಹವಾಗಿದೆ.

7,172 ಕ್ಯೂಸೆಕ್ ಒಳ ಹರಿವು ದಾಖಲಾದರೆ, 6,560 ಕ್ಯೂಸೆಕ್ ಹೊರ ಹರಿವು ದಾಖಲಾಗಿದೆ. ಪ್ರಸಕ್ತ ಮುಂಗಾರಿನಲ್ಲಿ ಜಲಾಶಯಕ್ಕೆ ಒಟ್ಟಾರೆ 2.235 ಟಿಎಂಸಿ ಹೊಸ ನೀರು ಹರಿದು ಬಂದಿದೆ. ಇನ್ನು ಸಾಕಷ್ಟು ಪ್ರಮಾಣದ ನೀರು ಹರಿದು ಬರುತ್ತಿದೆ.