ಕಾಯ ಕಣ್ಮರೆಯಾದರೂ ನೆನಪು ಶಾಶ್ವತ :  ರಂಭಾಪುರಿ ಶ್ರೀ

ಗದಗ-ಜೂ.೨೩; ಮನುಷ್ಯ ಎಷ್ಟು ವರುಷ ಬದುಕಿದರೂ ಒಂದಿಲ್ಲ ಒಂದು ದಿನ ಅಗಲಿಕೆ ಅನಿವಾರ್ಯ. ಕಾಯ ಕಣ್ಮರೆಯಾದರೂ ನೆನಹು ಮಾತ್ರ ಶಾಶ್ವತವಾಗಿ ಉಳಿಯುವ ಹಾಗೆ ಶ್ರಮಿಸಿದ ಕೀರ್ತಿ- ಗೌರವ ಲಿಂ.ಕೊಟ್ಟೂರು ಬಸವೇಶ್ವರ ಶಿವಾಚಾರ್ಯರಿಗೆ ಸಲ್ಲುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು  ಗದಗ ನಗರದ ಸೂಡಿ ಜುಕ್ತಿ ಹಿರೇಮಠದ ಶ್ರೀ ಜಗದ್ಗುರು ವಿಶ್ವಾರಾಧ್ಯ ಮಂದಿರದಲ್ಲಿ ಲಿಂ. ಕೊಟ್ಟೂರು ಬಸವೇಶ್ವರ ಶ್ರೀಗಳ 105ನೇ ವರುಷದ ಪುಣ್ಯಾರಾಧನೆ-ಸುಪ್ರಭಾತ ಬಿಡುಗಡೆ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಮನುಷ್ಯ ಜೀವನದಲ್ಲಿ ನಾಲ್ಕು ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಾಧಿಸದಿದ್ದರೆ ವ್ಯರ್ಥ. ಧರ್ಮ ಅರ್ಥ ಕಾಮ ಮತ್ತು ಮೋಕ್ಷಗಳೆಂಬ ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಾಧಿಸುವ ಛಲ ಹೊಂದಿರಬೇಕಾಗುತ್ತದೆ. ಮನುಷ್ಯ ಯಾವಾಗಲೂ ಬಯಸುವುದು ಸಂಪತ್ತು ಮತ್ತು ಆ ಸಂಪತ್ತಿನಿAದ ತನ್ನ ಇಷ್ಟಾರ್ಥಗಳನ್ನು ಪಡೆಯಲು ಬಯಸುತ್ತಾನೆ. ಆದರೆ ಇವೆರಡು ಪ್ರಾಪ್ತವಾಗಬೇಕಾದರೆ ಮೊದಲು ಧರ್ಮಾಚರಣೆಯೇ ಮೂಲವಾಗಿದೆ. ಉಜ್ವಲ ಭವಿಷ್ಯಕ್ಕೆ ಧರ್ಮ ದಿಕ್ಸೂಚಿಯಾಗಿದೆ. ನಿಜವಾದ ಆಚರಣೆಯೇ ಧರ್ಮವೆಂದೆನಿಸಿಕೊಳ್ಳುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಧರ್ಮದ ದಶ ಸೂತ್ರಗಳನ್ನು ಲಿಂ.ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು ಬದುಕಿನ ಆಚರಣೆಯಲ್ಲಿ ತಂದು ಭಕ್ತರ ಬಾಳಿಗೆ ಬೆಳಕು ತೋರಿದವರು. ಹುಟ್ಟು ಸಾವು ಮನುಷ್ಯನ ಕೈಯಲ್ಲಿಲ್ಲ. ಆದರೆ ಬದುಕು ಮಾತ್ರ ನಮ್ಮ ಕೈಯಲ್ಲಿದೆ. ಹುಟ್ಟು ಸಾವುಗಳ ಮಧ್ಯೆ ಇರುವ ಬದುಕನ್ನು ಸಮೃದ್ಧವಾಗಿ ಕಟ್ಟಿಕೊಳ್ಳುವ ಜವಾಬ್ದಾರಿ ಅವರವರದಾಗಿದೆ. ಲಿಂಗೈಕ್ಯ ಶ್ರೀಗಳು ಧರ್ಮ ಮುಖಿಯಾಗಿ ಸಮಾಜ ಮುಖಿಯಾಗಿ ಕಾರ್ಯ ನಿರ್ವಹಿಸಿದ್ದನ್ನು ಮರೆಯಲು ಸಾಧ್ಯವಿಲ್ಲ. ಇದೇ ಸಂದರ್ಭದಲ್ಲಿ ಅವರ ಸುಪ್ರಭಾತ-ನಾಮಾವಳಿ ಹಾಗೂ ಭಕ್ತಿ ಗೀತೆಗಳ ಕೃತಿ ಬಿಡುಗಡೆಗೊಳಿಸಿರುವುದು ಸಂತೋಷದ ಸಂಗತಿ. ಇಂದಿನ ಪಟ್ಟಾಧ್ಯಕ್ಷರಾದ ಡಾ.ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು ಪೂರ್ವಜರು ಹಾಕಿದ ಹೆದ್ದಾರಿಯಲ್ಲಿ ಮುನ್ನಡೆದು ಭಕ್ತರಿಗೆ ಸಂಸ್ಕಾರ ಧರ್ಮಾಚಾರಗಳನ್ನು ಮನವರಿಕೆ ಮಾಡಿಕೊಡುತ್ತಿರುವುದು ಅವರ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ ಎಂದರು.ಸಮಾರಂಭ ಉದ್ಘಾಟಿಸಿದ ಮಾಜಿ ಸಚಿವ ಸಿ.ಸಿ.ಪಾಟೀಲ ಮಾತನಾಡಿ ಧರ್ಮವಿಲ್ಲದೇ ಮನುಷ್ಯ ಬಾಳಲು ಸಾಧ್ಯವಾಗದು. ವ್ಯಕ್ತಿತ್ವ ವಿಕಾಸಕ್ಕೆ ಧರ್ಮ ಜ್ಞಾನದ ಅವಶ್ಯಕತೆಯಿದೆ. ಲಿಂ.ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಸಂಸ್ಕೃತ ವಿದ್ವಾಂಸರಾಗಿ ಭಕ್ತರ ಬಾಳಿಗೆ ಸಂಜೀವಿನಿಯಾಗಿದ್ದರೆAದು ಹರುಷ ವ್ಯಕ್ತಪಡಿಸಿದರು. ನವಲಗುಂದ ಕ್ಷೇತ್ರದ ಶಾಸಕ ಎನ್.ಎಚ್.ಕೋನರೆಡ್ಡಿ ಸುಪ್ರಭಾತ ಕೃತಿ ಬಿಡುಗಡೆ ಮಾಡಿ ವೀರಶೈವ ಧರ್ಮದ ಆದರ್ಶಗಳ ಮಹತ್ವ ಬಹಳಷ್ಟಿದೆ ಎಂದರು. ಅಧ್ಯಕ್ಷತೆ ವಹಿಸಿದ ವಿಧಾನ ಪರಷತ್ ಸದಸ್ಯ ಎಸ್.ವಿ.ಸಂಕನೂರು ಮಾತನಾಡಿ ಮನುಷ್ಯ ಜೀವನದಲ್ಲಿ ಧರ್ಮಾಚರಣೆಯ ಜೊತೆಗೆ ಸಾಮಾಜಿಕ ಸಂವೇದನಗಳ ಮೂಲಕ ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ. ಲಿಂಗೈಕ್ಯ ಶ್ರೀಗಳವರ ಸಾಧನೆ ಮತ್ತು ಪರಿಶ್ರಮ ನಮ್ಮೆಲ್ಲರ ಬಾಳಿಗೆ ಆಶಾಕಿರಣವಾಗಿದೆ ಎಂದರು. ನೇತೃತ್ವ ವಹಿಸಿದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಮಾತನಾಡಿ ವೀರಶೈವ ಧರ್ಮ ವಿಶ್ವ ಬಂಧುತ್ವ ಮತ್ತು ಸಾಮರಸ್ಯ ಬದುಕಿಗೆ ಅತ್ಯಮೂಲ್ಯವಾದ ಕೊಡುಗೆ ಕೊಟ್ಟಿದೆ. ಶಿಕ್ಷಣ ಮತ್ತು ಸಂಸ್ಕಾರದಿAದ ಜೀವನ ಉಜ್ವಲಗೊಳ್ಳಲು ಸಾಧ್ಯ. ಲಿಂಗೈಕ್ಯ ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಧರ್ಮ ಸಂಸ್ಕೃತಿಯ ಉಳಿವು ಬೆಳವಣಿಗೆಗಾಗಿ ಬಹು ದೊಡ್ಡ ಕೊಡುಗೆಯನ್ನು ಕೊಟ್ಟಿದ್ದಾರೆ. ಅವರ 105ನೇ ವರ್ಷದ ಪುಣ್ಯ ಸ್ಮರಣೋತ್ಸವ ಶ್ರೀ ರಂಭಾಪುರಿ ಜಗದ್ಗುರುಗಳವರ ಸಾನ್ನಿಧ್ಯದಲ್ಲಿ ಜರುಗುತ್ತಿರುವುದು ಎಲ್ಲ ಭಕ್ತ ಮಂಡಳಿಗ ಹರುಷ ತಂದಿದೆ ಎಂದರು. ಹಲವಾರು ಗಣ್ಯರಿಗೆ ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು. ಪ್ರಕಾಶ ಬೇಲಿ ಸ್ವಾಗತಿಸಿದರು. ಚಂದ್ರು ಬಾಳೆಹಳ್ಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರೇಶ ಕಿತ್ತೂರು ಅವರಿಂದ ಸಂಗೀತ ಜರುಗಿತು. ಸೂಡಿಯ ಉಮೇಶ ಗುಡಿಮನಿ ನಿರೂಪಣೆ ನಿರ್ವಹಿಸಿದರು. ಸಮಾರಂಭದ ನಂತರ ಸಕಲ ಸದ್ಭಕ್ತರಿಗೆ ಅನ್ನ ದಾಸೋಹ ಜರುಗಿತು.ಬೆಳಿಗ್ಗೆ ಶ್ರೀ ಜಗದ್ಗುರು ವಿಶ್ವಾರಾಧ್ಯ ಮಂಗಲ ಮೂರ್ತಿಗೆ ವಿಶೇಷ ಪೂಜೆ ಹಾಗೂ ಪುಷ್ಪಾಲಂಕಾರ ಜರುಗಿತು.