ಕಾಯಿ ಹಾಲಿನ ಹೋಳಿಗೆ

ಸಾಮಗ್ರಿ: ತೆಂಗಿನಕಾಯಿ ತುರಿ-1 ಕಪ್‌, ಹಾಲು-ಮುಕ್ಕಾಲು ಕಪ್‌, ಗಸಗಸೆ-ಅರ್ಧ ಕಪ್‌, ಬೆಲ್ಲ-1 ಕಪ್‌, ಏಲಕ್ಕಿ-3, ಎಣ್ಣೆ-ಕರಿಯಲು, ಉಪ್ಪು-1 ಚಿಟಿಕೆ, ಮೈದಾ ಹಿಟ್ಟು-ಮುಕ್ಕಾಲು ಕಪ್‌, ಚಿರೋಟಿ ರವೆ-ಕಾಲು ಕಪ್‌.
ವಿಧಾನ: ಮೈದಾ ಮತ್ತು ಚಿರೋಟಿ ರವೆಗೆ ಉಪ್ಪು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ನಂತರ ಒಂದೆರಡು ಚಮಚ ತುಪ್ಪ ಹಾಕಿ ಮತ್ತೆ ಕಲಸಿ ಕಣಕ ತಯಾರಿಸಿಡಿ. ಹುರಿದ ಗಸಗಸೆಗೆ ತೆಂಗಿನಕಾಯಿ ತುರಿ ಮತ್ತು ಏಲಕ್ಕಿ ಹಾಕಿ ರುಬ್ಬಿ. ಬೆಲ್ಲವನ್ನು ಕರಗಿಸಿ ಸೋಸಿ. ಇದಕ್ಕೆ ರುಬ್ಬಿದ ಮಿಶ್ರಣ, ಹಾಲು ಮತ್ತು ಸ್ವಲ್ಪ ನೀರು ಹಾಕಿ ಚೆನ್ನಾಗಿ ಕುದಿಸಿ. ಈಗ ಕಾಯಿ ಹಾಲು ರೆಡಿ. ಆಗಲೇ ತಯಾರಿಸಿಟ್ಟ ಕಣಕದಿಂದ ತೆಳುವಾದ ಪೂರಿಗಳನ್ನು ಲಟ್ಟಿಸಿ ಎಣ್ಣೆಯಲ್ಲಿ ಕರಿದು, ಬಿಸಿ ಕಾಯಿ ಹಾಲಿನಲ್ಲಿ ಅದ್ದಿ ತಕ್ಷ ಣ ತೆಗೆದು ಬಡಿಸಿ.